ಬಾಲಿವುಡ್‌ ನಿರ್ದೇಶಕ ರೋಹಿತ್‌ ಶೆಟ್ಟೆ ಮನೆ ಬಳಿ ಗುಂಡಿನ ದಾಳಿ

ಗುಂಡು ಹಾರಿಸಿ ಆತಂಕ ಸೃಷ್ಟಿಸಿದ ಅಜ್ಞಾತ ವ್ಯಕ್ತಿಗಳು

ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ದೇಶಕ-ನಿರ್ಮಾಪಕ ರೋಹಿತ್ ಶೆಟ್ಟಿಯವರ ಜುಹುವನಲ್ಲಿರುವ ಮನೆಯ ಬಳಿ ಗುಂಡಿನ ದಾಳಿ ನಡೆಸಿ ಆತಂಕದ ವಾತಾವರಣ ಸೃಷ್ಟಿಲಾಗಿದ್ದು, ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಗುಂಡಿನ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.

ಮುಂಬೈ ಪೊಲೀಸರು ಮತ್ತು ವಿಧಿವಿಜ್ಞಾನ ತಂಡದ ಶೆಟ್ಟಿ ನಿವಾಸಕ್ಕೆ ಧಾವಿಸಿ, ಮನೆಯ ಆವರಣದಲ್ಲಿ ಶೋಧ ಕಾರ್ಯ ಕೈಗೊಂಡಿದೆ. ಗುಂಡಿನ ಸದ್ದು ಕೇಳಿಬಂದ ತಕ್ಷಣ ರೋಹಿತ್ ಪೊಲೀಸರಿಗೆ ಮಾಹಿತಿ ನೀಡಿದರು. ಯಾವುದೇ ಗಾಯ ಅಥವಾ ಜೀವಹಾನಿ ವರದಿಯಾಗಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ.





















































 
 

ವಿಧಿವಿಜ್ಞಾನ ತಂಡ ಹಲವು ಸಾಧ್ಯತೆಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಶೀಲನೆಗಾಗಿ ತಂಡಗಳನ್ನು ನಿಯೋಜಿಸಲಾಗಿದೆ. ಈ ಶಬ್ದದ ಮೂಲ ಅಥವಾ ಸ್ವರೂಪದ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಘಟನೆ ಬಳಿಕ ರೋಹಿತ್ ನಿವಾಸದ ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚಿತ್ರ ನಿರ್ದೇಶಕರ ಮನೆಯ ಮುಂದೆ ಪೊಲೀಸ್ ವಾಹನಗಳು ಹಾಗೂ ಭದ್ರತಾ ಸಿಬ್ಬಂದಿ ಬೀಡುಬಿಟ್ಟಿರುವುದು ಹಾಗೂ ಬಾಲ್ಕನಿಯಲ್ಲಿ ಶೋಧ ಕಾರ್ಯ ನಡೆಸುತ್ತಿರವುದು ವಿಡಿಯೊಗಳಲ್ಲಿ ಕಾಣಿಸುತ್ತಿದೆ. ಸಿಂಗಮ್ ಹಾಗೂ ಗೋಲ್‍ಮಾಲ್‍ನಂಥ ಸೂಪರ್ ಚಿತ್ರಗಳ ಮೂಲಕ ಭಾರತೀಯ ಸಿನಿಮಾ ಜಗತ್ತಿನಲ್ಲಿ ರೋಹಿತ್ ಶೆಟ್ಟಿ ಗಮನ ಸೆಳೆದಿದ್ದಾರೆ.

error: Content is protected !!
Scroll to Top