ನೆಂಟರ ಮನೆಯಿಂದ ಚಿನ್ನಾಭರಣದ ಗಂಟು ಕದ್ದ ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ: ನೆಂಟರ ಮನೆಗೆ ಕಾರ್ಯಕ್ರಮಕ್ಕೆ ಬಂದು, ಚಿನ್ನಾಭರಣ ಕಳ್ಳತನ ಮಾಡಿದ ಎಂಜಿನಿಯರಿಂಗ್ ವಿದ್ಯಾರ್ಥಿನಿ ‌ಮತ್ತು ಆಕೆಯ ಗೆಳೆಯನನ್ನು ಪೇರೆಸಂದ್ರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಮುತ್ತುಕದಹಳ್ಳಿ ನಿವಾಸಿ ರಮ್ಯಾ ಮತ್ತು ಅವಳ ಪರಿಚಯಸ್ಥ, ವೃತ್ತಿಯಲ್ಲಿ ಚಾಲಕನಾಗಿರುವ ವಿನಯ ಕುಮಾರ್ ಎಂದು ಗುರುತಿಸಲಾಗಿದೆ.

ಮುತ್ತುಕದಹಳ್ಳಿಯ ಪದ್ಮಾವತಮ್ಮ ಎಂಬವರ ಮನೆಯಲ್ಲಿ 2025 ರ ಡಿ. 18 ರಂದು ಒಂದು ತಿಥಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ರಮ್ಯಾ ಮತ್ತು ವಿನಯ್ ಸಹ ಹೋಗಿದ್ದು, ಅಲ್ಲಿ ನೆರೆದಿದ್ದವರ ಕಣ್ಣು ತಪ್ಪಿಸಿ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಎಗರಿಸಿದ್ದಾರೆ. ಸಮಾರಂಭ ಕಳೆದು ಕೆಲ ದಿನಗಳ ಬಳಿಕ ಪದ್ಮಾವತಮ್ಮ ಅವರು ಕಪಾಟು ತೆರೆದಿದ್ದು, ಈ ಸಂದರ್ಭದಲ್ಲಿ ಚಿನ್ನಾಭರಣ ಕಳ್ಳರ ಪಾಲಾಗಿರುವ ಸಂಗತಿ ಬೆಳಕಿಗೆ ಬಂದಿದೆ.





















































 
 

ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದು, ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ, ವಿಚಾರಣೆಯ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ.

error: Content is protected !!
Scroll to Top