ಹದೆಗೆಟ್ಟ ಪಾಕ್ ಹಣಕಾಸು ಪರಿಸ್ಥಿತಿ

ಇಸ್ಲಮಾಬಾದ್: ಪಾಕಿಸ್ತಾನದ ಹಣಕಾಸು ಪರಿಸ್ಥಿತಿ ಹದೆಗೆಟ್ಟಿದೆ ಎನ್ನುವುದನ್ನು ಅಲ್ಲಿನ ಪ್ರಧಾನಿ ಶೆಹಬಾಜ್ ಷರೀಫ್ ಅವರೇ ಒಪ್ಪಿಕೊಂಡಿದ್ದಾರೆ.

ಪಾಕ್‌ನ ಆರ್ಥಿಕ ದುಸ್ಥಿತಿಯನ್ನು ವಿವರಿಸಿರುವ ಅವರು, ಮಿತ್ರ ರಾಷ್ಟ್ರಗಳನ್ನು ಪಾಕಿಸ್ತಾನ ಭೇಟಿ ಮಾಡಲು ಬಯಸಿದಾಗಲೂ, ನಾವು ನೆರವು ಕೇಳುವುದಕ್ಕಾಗಿಯೇ ಬಂದಿದ್ದೇೆವೆ ಎನ್ನುವ ಭಾವನೆ ಅವರಲ್ಲಿ ಮೂಡುತ್ತದೆ. ನಮ್ಮ ತಲೆಗಳು ಸಾಲದ ಭಾರದ ಕಾರಣಕ್ಕೆ ಅವಮಾನದಿಂದ ನೆಲ ನೋಡುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಚೀನಾ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ಪಡೆದ ಸಾಲದ ಬಡ್ಡಿಯೂ ಪಾಕ್‌ಗೆ ಹೊಡೆತ ನೀಡುತ್ತಿದೆ. ಪರಮಾಣು ಶಕ್ತಿಯ ದೇಶವಾಗಿದ್ದರೂ, ಸಣ್ಣ ಆರ್ಥಿಕ ಸಹಾಯಕ್ಕೂ ಇತರ ದೇಶಗಳ ಅವಲಂಬನೆ ಮಾಡಬೇಕಗಿರುವುದು ಪಾಕಿಸ್ತಾನಕ್ಕೆ ಅನಿವಾರ್ಯವಾಗಿದೆ. ಬೆಲೆ ಏರಿಕೆಯ ಬಿಸಿ ಅಲ್ಲಿನ ಜನರನ್ನು ಕಂಗೆಡಿಸಿದೆ. ಹಾಗೆಯೇ ವಿದೇಶಿ ವಿನಿಮಯ ಸಂಗ್ರಹ ಕೆಲವೇ ವಾರಗಳಿಗೆ ಸಾಕಾಗುವಷ್ಟಿದೆ.





















































 
 

ಈ ಎಲ್ಲಾ ರೀತಿಯ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಸರ್ಕಾರ ಖರ್ಚು ಕಡಿಮೆ ಮಾಡಬೇಕು ಮತ್ತು ಉದ್ಯಮಿಗಳು ಹೆಚ್ಚು ತೆರಿಗೆ ಪಾವತಿಸುವಂತೆಯೂ ಷರೀಫ್ ಸೂಚಿಸಿದ್ದಾರೆ.

error: Content is protected !!
Scroll to Top