ಗ್ಯಾರೇಜಿನಲ್ಲಿ ಜಗಳ, ಹಲ್ಲೆ: ದೂರು ದಾಖಲು

ಪುತ್ತೂರು: ನಗರದ ಪರ್ಲಡ್ಕ ಎಂಬಲ್ಲಿರುವ ಶ್ರೀ ಮಹಾಲಿಂಗೇಶ್ವರ ಆರ್. ಆರ್. ವರ್ಕ್ಸ್‌ನಲ್ಲಿ ಅದರ ಮಾಲೀಕ ಮತ್ತು ವ್ಯಕ್ತಿಯೊಬ್ಬರ ‌ನಡುವೆ ಮಾತಿನ ಚಕಮಕಿ ನಡೆದು, ಹಲ್ಲೆ ನಡೆದ ಬಗ್ಗೆ ಪ್ರಕರಣ ದಾಖಲಾಗಿದೆ.

ಗ್ಯಾರೇಜಿನ ಮಾಲೀಕ ಬಲ್ನಾಡು ನಿವಾಸಿ ರಮೇಶ್ ಆಚಾರ್ಯ ಅವರು ಈ ಕುರಿತು ದೂರು ನೀಡಿದ್ದಾರೆ.

ಜ. 27 ರಂದು ತಾನು ಗ್ಯಾರೇಜ್ ಓಪನ್ ಮಾಡುತ್ತಿದ್ದ ವೇಳೆ ರಮೇಶ್ ನಾಯ್ಕ್ ಎಂಬವರು ಇನ್ನೋವಾ ಕಾರಿನಲ್ಲಿ ಬಂದು, ಕಾರಿನ ಕ್ಯಾರಿಯರ್ ಮಾರಾಟಕ್ಕೆ ಸಂಬಂಧಿಸಿದ ಹಾಗೆ ಜಗಳವಾಡಿದ್ದಾರೆ. ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.





















































 
 

error: Content is protected !!
Scroll to Top