ತಿರುಪತಿಯಲ್ಲಿ ನವಜೋಡಿ ಫೋಟೋ ಶೂಟ್: ಭಕ್ತರ ಆಕ್ರೋಶ

ತಿರುಮಲ: ತಿರುಪತಿ ತಿರುಮಲ ಶ್ರೀವಾರಿ ದೇಗುಲದ ಮುಂಭಾಗದಲ್ಲಿ ನವಜೋಡಿಯೊಂದು ನಡೆಸಿರುವ ಫೋಟೋಶೂಟ್‌ಗೆ ಭಕ್ತರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ತಮ್ಮ ಅಸಭ್ಯ ಫೋಟೋಶೂಟ್ ಮೂಲಕ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾಗಿರುವಂತೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಭಕ್ತರ ಕೆಂಗಣ್ಣಿಗೆ ನವ ಜೋಡಿ ಗುರಿಯಾಗಿರುವುದಾಗಿದೆ.

ತಮಿಳುನಾಡು‌ ಮೂಲದ ಜೋಡಿ ಮದುವೆಯ ಬಳಿಕ ಶ್ರೀ ವೆಂಕಟೇಶ್ವರನ ದರ್ಶನ ಪಡೆದು, ಆ ಬಳಿಕ ದೇಗುಲದ ಆವರಣದ ಗೊಲ್ಲಮಂಟಪದ ಸಮೀಪ ವಿಶೇಷ ಬೆಳಕಿನಲ್ಲಿ ಪರಸ್ಪರ ಚುಂಬಿಸಿಕೊಂಡಂತೆ ಫೋಟೋ ತೆಗೆಸಿಕೊಂಡಿದ್ದಾರೆ. ಇದು ಭಕ್ತರು ಅತ್ತಿಂದಿತ್ತ ಓಡಾಡುವ ಸಂದರ್ಭದಲ್ಲಿ ಅವರುಗಳ ಕಣ್ಣಿಗೆ ಬಿದ್ದಿದ್ದು, ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಮಾಡುವ ಇಂತಹ ವಿಷಯಕ್ಕೆ ಅಸಮಾಧಾನಗೊಂಡಿದ್ದಾರೆ.





















































 
 

ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಟಿಟಿಡಿ, ದೇಗುಲದ ಆವರಣದಲ್ಲಿ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು, ರೀಲ್ಸ್ ಮಾಡುವುದನ್ನು ನಿಷೇಧ ಮಾಡಲಾಗಿದೆ ಎನ್ನುವ ಎಚ್ಚರಿಕೆಯ ಸೂಚನೆಯನ್ನು ಮತ್ತೆ ನೀಡಿದೆ.

ಘಟನೆಯ ಬಳಿಕ ನವಜೋಡಿ ‌ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೇಳಿದ್ದು, ಫೋಟೋ ತೆಗೆಯಬಾರದು ಎನ್ನುವ ಬಗ್ಗೆ ನಮಗೆ ಗೊತ್ತಿರಲಿಲ್ಲ. ಮುಂದೆ ಇಂತಹ ತಪ್ಪಾಗುವುದಿಲ್ಲ ಎಂದು ಕ್ಷಮೆ ಕೇಳಿದ್ದಾರೆ.

error: Content is protected !!
Scroll to Top