ಮಂಗಳೂರು: ರಾಜೀವ್‌ ಗೌಡ ತಂಗಿದ್ದ ಫಾರ್ಮ್‌ ಹೌಸ್‌ನಲ್ಲಿ ಪೊಲೀಸ್‌ ಶೋಧ

ಪೌರಾಯುಕ್ತಗೆ ನಿಂದಿಸಿ ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಕಾಂಗ್ರಸ್‌ ಮುಖಂಡ

ಮಂಗಳೂರು: ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್‌ ಮುಖಂಡ ರಾಜೀವ್ ಗೌಡ ತಂಗಿದ್ದ ರೆಸಾರ್ಟ್, ಆತನ ಕಾರು ಪತ್ತೆಯಾಗಿದ್ದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಗುರುವಾರ ಸಂಜೆ ಶಿಡ್ಲಘಟ್ಟದ ಪೊಲೀಸರು ಮಹಜರು ನಡೆಸಿದ್ದಾರೆ.

ಗುರುವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ಪೊಲೀಸ್ ವಾಹನದಲ್ಲಿ ಪಚ್ಚನಾಡಿಗೆ ಬಂದು ಒಂದು ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿ ಆತ ವಾಸ್ತವ್ಯ ಇದ್ದುದಕ್ಕೆ ಪೂರಕ ಸಾಕ್ಷಿ ಸಂಗ್ರಹಿಸಿದ್ದಾರೆ. ಆತನ ತಂಗಿದ್ದ ಕೊಠಡಿ, ಸೇವನೆ ಮಾಡಿದ ಆಹಾರ ಇತ್ಯಾದಿಗಳ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.





















































 
 

ಮಹಜರು ವೇಳೆ ಫಾರ್ಮ್ ಹೌಸ್‌ನಲ್ಲಿ ಕೆಲಸದಾಳುಗಳು ಮಾತ್ರ ಇದ್ದರು. ಅವರನ್ನೂ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ಪಡೀಲ್ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿಯೂ ಮಹಜರು ನಡೆಸಿದ್ದಾರೆ. ಪ್ರಕರಣ ದಿಕ್ಕು ತಪ್ಪಿಸುವ ಉದ್ದೇಶದಿಂದ ರಾಜೀವ್ ಗೌಡನ ಕಾರನ್ನು ಆತನ ಚಾಲಕ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಿಲ್ಲಿಸಿ ಹೋಗಿದ್ದ. ಪೊಲೀಸರು ಚಾಲಕನನ್ನು ಕರೆದುಕೊಂಡು ಬಂದು ರೈಲು ನಿಲ್ದಾಣದಲ್ಲಿಯೂ ಮಹಜರು ನಡೆಸಿದ್ದಾರೆ. ಇದೇ ವೇಳೆ ಮಂಗಳೂರಿನ ಪಡೀಲ್‌ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿಯೂ
ಶಿಡ್ಲಘಟ್ಟ ವೃತ್ತ ನಿರೀಕ್ಷಕ ಆನಂದ್ ಕುಮಾರ್ ನೇತೃತ್ವದಲ್ಲಿ ಆತನನ್ನು ಕರೆದುಕೊಂಡು ಬಂದಿದ್ದು, ಈ ವೇಳೆ ಪೊಲೀಸರು ಮಾಧ್ಯಮಗಳಿಗೆ ಹೇಳಿಕೆ ನೀಡಿಲ್ಲ.

error: Content is protected !!
Scroll to Top