ಅರುಣ್ ಕುಮಾರ್ ಪುತ್ತಿಲರಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯಧನ
ಪುತ್ತೂರು: ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದಿಂದ ಜೀವನದ ದಾರಿಯೇ ಕತ್ತಲಾಗಿ ಕಾಣುತ್ತಿದ್ದ ಕಾವು–ಮಾಡ್ನೂರು ಗ್ರಾಮದ ಹಲವು ಕುಟುಂಬಗಳಿಗೆ ಮಾನವೀಯತೆಯ ಬೆಳಕಾಗಿ ಸಮಾಜಸೇವಕ ಹಾಗೂ ಹಿಂದೂ ಮುಖಂಡ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಜೊತೆ ನಿಂತರು.

ಗ್ರಾಮಸ್ಥರು ಸಂಗ್ರಹಿಸಿದ ಸಹಾಯಧನವನ್ನು ಪುತ್ತಿಲ ಪರಿವಾರದ ಕಾವು ಘಟಕದ ಮೂಲಕ ಮನೆಮನೆಗೆ ತೆರಳಿ ಹಸ್ತಾಂತರಿಸಿದ ಅವರು, ಕೇವಲ ಹಣವಷ್ಟೇ ಅಲ್ಲ — ನೋವಿನಲ್ಲಿ ಮುಳುಗಿದ್ದ ಕುಟುಂಬಗಳಿಗೆ ಧೈರ್ಯ, ಆತ್ಮವಿಶ್ವಾಸ ಮತ್ತು ಬದುಕಿನ ಭರವಸೆಯನ್ನು ನೀಡಿದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಮಾನಸಿಕ – ಆರ್ಥಿಕವಾಗಿ ಕುಗ್ಗಿಹೋಗಿದ್ದ ಸುಮಾರು ನಾಲ್ಕು ಕುಟುಂಬಗಳಿಗೆ ಸಹಾಯಹಸ್ತ ಚಾಚಿದರು.
ಬಳಿಕ ಮಾತನಾಡಿದ ಪುತ್ತಿಲ, ಇಂತಹ ಸಂಕಷ್ಟದ ಸಮಯದಲ್ಲಿ ನೋವಿಗೆ ಸ್ಪಂದಿಸುವ ಗ್ರಾಮಸ್ಥರ ಮನಸ್ಸೇ ನಮ್ಮ ಸಮಾಜದ ಶಕ್ತಿ. ಇವರು ಈ ನಾಡಿನ ನಿಜವಾದ “ಮುತ್ತುಗಳು” ದಾನಿಗಳ ಮಾನವೀಯತೆಯನ್ನು ಹೃದಯಪೂರ್ವಕವಾಗಿ ಶ್ಲಾಘಿಸಿದರು.
ಕರಸೇವಕರಿಗೆ ಅಯೋಧ್ಯೆ ದರ್ಶನದ ಭರವಸೆ
ಈ ಸಂದರ್ಭ, ಈ ಹಿಂದೆ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಪಳನೀರು ಅಣ್ಣು ಪೂಜಾರಿಯವರ ನಿವಾಸದಲ್ಲಿ ಮಾತನಾಡಿದ ಪುತ್ತಿಲರು, ಮಾಡ್ನೂರು ಗ್ರಾಮದಲ್ಲಿ ಕರಸೇವೆಯಲ್ಲಿ ತೊಡಗಿಸಿಕೊಂಡ ಎಲ್ಲ ಕರಸೇವಕರಿಗೆ ಅಯೋಧ್ಯೆಯ ಶ್ರೀರಾಮ ಮಂದಿರ ದರ್ಶನಕ್ಕಾಗಿ ಉಚಿತ ಪ್ರಯಾಣ ಭತ್ಯೆಯನ್ನು ಭರಿಸಲಾಗುವುದು ಎಂದು ಭರವಸೆ ನೀಡಿದ್ದು, ಕರಸೇವಕರ ಮನಸ್ಸಿನಲ್ಲಿ ಹೊಸ ಉತ್ಸಾಹ ತುಂಬಿತು.
ದಾನಿಗಳ ಸಹಕಾರದೊಂದಿಗೆ ಕಾವು ಘಟಕದಿಂದ ನಡೆದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಈ ವೇಳೆ ಅರುಣ್ ಕುಮಾರ್ ಪುತ್ತಿಲರೊಂದಿಗೆ ಪರಿವಾರದ ಸದಸ್ಯರು ಹಾಗೂ ದಾನಿಗಳು ಮನೆಮನೆಗೆ ಭೇಟಿ ನೀಡಿ ಕುಟುಂಬಗಳ ನೋವಿನೊಂದಿಗೆ ಬೆರೆತು, ಮಾನವೀಯತೆಯೇ ನಮ್ಮ ನಿಜವಾದ ಧರ್ಮ ಎಂಬ ಸಂದೇಶವನ್ನು ಸಾರಿದರು.
























