ಬೆಳ್ತಂಗಡಿ: ಮನೆಯ ಬಳಿ ನೀರಿನ ಪಂಪ್ ಆನ್ ಮಾಡುವ ವೇಳೆ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರಿಪಳ್ಳ ಬಳಿಯ ಕಡಿಯಾರು ಗ್ರಾಮದ ಬಳಿ ನಡೆದಿದೆ.
ಶಿವಪ್ರಸಾದ್ ಆದಪ್ಪ (48) ಎಂಬವರೇ ಮೃತ ದುರ್ದೈವಿ.
ಅವರು ಪ್ರತಿನಿತ್ಯದ ಕೆಲಸ ಮುಗಿಸಿ ಬೆಳಗ್ಗೆ ತಮ್ಮ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಧಿಸಿದ ಪರಿಣಾಮ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಉಜಿರೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟೇಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷಾ ಹಿನ್ನೆಲೆ ಶವವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
























