ಬೆಂಗಳೂರು: ಭಾರತದ ಆರ್ಥಿಕತೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಗೊತ್ತಿಲ್ಲ. ಇನ್ಯಾವುದೋ ದೇಶದಲ್ಲಿ ನಿಂತು ನಾವು ನಮ್ಮ ದೇಶವನ್ನು ಬಳಸಿಕೊಳ್ಳಲು ಆಗುವುದೇ? ದೇಶದ ಧ್ವಜ ಹಾಕಿಕೊಂಡು ಹೋಗಿ ದೇಶವನ್ನು ತೆಗಳಲಾಗುತ್ತದೆಯೇ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರದ ನೀತಿಯಿಂದ ಭಾರತದ ಆರ್ಥಿಕತೆ ನಾಶವಾಗಿದೆ. ಹೀಗಾಗಿ ದೇಶಕ್ಕೆ ಹೂಡಿಕೆಗಳು ಬರುತ್ತಿಲ್ಲ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಈ ವಿಷಯವನ್ನು ರಾಜಕೀಯಗೊಳಿಸಬೇಡಿ. ಹೃದಯ ಶ್ರೀಮಂತಿಕೆಯಿಂದ ನೋಡಿ. ನಾವು ಪ್ರಗತಿಯನ್ನು ಸಂಭ್ರಮಿಸೋಣ. ಬೇರೆಯವರ ತಪ್ಪನ್ನು ಹುಡುಕುವುದು ಬೇಡ. ನಾವು ಭಾರತಕ್ಕೆ ನೋವು ಮಾಡುವುದಿಲ್ಲ. ರಾಹುಲ್ ಗಾಂಧಿ ಅವರು ಕೂಡಾ ಹಾಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ರಾಜಕೀಯದ ಅನುಭವ ಅಷ್ಟೋ ಇಷ್ಟೋ ಇದೆ. ಆ ಅನುಭವದಲ್ಲಿ ನಾನು ಹೇಳಿದ್ದೇನೆ. ರಾಹುಲ್ ಗಾಂಧಿ ಹೇಳಿದ್ದರ ಅರ್ಥ ನನಗೆ ಗೊತ್ತಿಲ್ಲ. ನಾನು ದೇಶವನ್ನು ಪ್ರೀತಿ ಮಾಡುತ್ತೇನೆ. ನಮ್ಮ ದೇಶವನ್ನು ಬಿಟ್ಟು ಕೊಡಲು ಆಗುತ್ತದೆಯೇ ಎಂದು ಕೇಳಿದ್ದಾರೆ.
ರಾಹುಲ್ ಗಾಂಧಿ ನಮ್ಮ ಆಂತರಿಕ ವಿಚಾರದ ಬಗ್ಗೆ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ದೇಶವನ್ನು ಬಿಟ್ಟು ಕೊಡುವುದಿಲ್ಲ. ನಾವು ನಮ್ಮ ದೇಶವನ್ನು ಬಿಟ್ಟುಕೊಡುವುದಿಲ್ಲ. ನಮ್ಮ ಸಂವಿಧಾನವನ್ನು ಇಡೀ ಪ್ರಪಂಚ ಒಪ್ಪಿದೆ. ದೇಶದ ಒಂದೊಂದು ರಾಜ್ಯದಷ್ಟು ವಿಸ್ತೀರ್ಣದಲ್ಲಿ ಬೇರೆ ದೇಶಗಳಿವೆ. ಕೇರಳದ ವಾತಾವರಣ, ಸಂಸ್ಕೃತಿ ಬೇರೆ ರೀತಿ ಇದೆ. ಅಲ್ಲಿನ ಶೇ.50ರಷ್ಟು ಜನ ವಿದೇಶಗಳಲ್ಲಿ ಇದ್ದಾರೆ. ಆಂಧ್ರಪ್ರದೇಶದವರು ತಮ್ಮದೆ ಆದ ಪ್ರಯತ್ನ ಮಾಡುತ್ತಿದ್ದಾರೆ. ಭಾರತದ ಧ್ವಜವನ್ನು ಹಾಕಿಕೊಂಡು ಹೋಗಿ, ಅದರ ವಿರುದ್ದವೇ ಮಾತನಾಡಲು ಸಾಧ್ಯವೇ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
























