ಧಾರವಾಡ: ಕೆಲಸ ಹುಡುಕಿ ಜ. 19 ರಂದು ಮನೆಯಿಂದ ಹೋಗಿದ್ದ ಯುವತಿ ಝಕಿಯಾ ಮುಲ್ಲ(19) ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ಆಕೆಯ ಪ್ರಿಯಕರ ಸಾಬೀರ್ ಮುಲ್ಲಾನೇ ಶಾಲಿನಿಂದ ಕತ್ತು ಹಿಸುಕಿ, ಕೊಲೆ ನಡೆಸಿದ್ದಾಗಿ ತಿಳಿದು ಬಂದಿದೆ.
ಝಕಿಯಾ ಮತ್ತು ಸಾಬೀರ್ ಸಂಬಂಧಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಮನೆಯವರು ಸಹ ಒಪ್ಪಿದ್ದು, ಮುಂದಿನ ತಿಂಗಳು ನಿಶ್ಚಿತಾರ್ಥ ನಡೆಸುವುದಕ್ಕೂ ಚಿಂತನೆ ನಡೆಸಿದ್ದರು. ಜ. 20 ರಂದು ಆತನ ಜೊತೆ ಆಕೆ ಸುತ್ತಾಡಲು ಹೋಗಿದ್ದಾಳೆ. ಈ ವೇಳೆ ಮದುವೆಗೆ ಸಂಬಂಧಿಸಿದ ಹಾಗೆ ಇವರಿಬ್ಬರ ನಡುವೆ ಜೋರಾದ ಜಗಳ ನಡೆದಿದೆ. ಕುಪಿತನಾದ ಸಾಬೀರ್ ಅವಳನ್ನು ವೇಲ್‌ನಿಂದ ಬಿಗಿದು ಕೊಂದಿದ್ದಾನೆ.
ಅದಾದ ಬಳಿಕ ಹತ್ಯೆ ಮಾಡಿದ ಸ್ಥಳದಿಂದ ತಾನೇ ಪೊಲೀಸರಿಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾನೆ. ಪೊಲೀಸರು
ಸ್ಥಳಕ್ಕೆ ಬಂದಾಗಲೂ ತನಗೆ ಏನೂ ತಿಳಿದಿಲ್ಲ ಎಂಬಂತೆ ನಟಿಸಿದ್ದಾನೆ. ಆದರೆ ಆತನ ನಡವಳಿಕೆಯ ಮೇಲೆ ಸಂದೇಹ ಬಂದು ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದು, ಸತ್ಯ ಬರಲಾಗಿದೆ.
ಮೃತ ದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ವಾರೀಸ್ದಾರರಿಗೆ ಒಪ್ಪಿಸಲಾಗಿದೆ.
























