ಪುತ್ತೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ರಾಜ್ಯ/ಜಿಲ್ಲಾ ಕ್ರೀಡಾ ಶಾಲೆ/ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಜನವರಿ 29 ರಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ನಡೆಯಲಿದೆ.
ಕಿರಿಯರ ವಿಭಾಗ
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2026-27ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ಹಾಗೂ ದಿನಾಂಕ: 01-06-2026 ಕ್ಕೆ 11 ವರ್ಷ ಒಳಗಿನವರಾಗಿರಬೇಕು.
ಪ್ರಸ್ತುತ ವರ್ಷ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2026-27 ನೇ ಸಾಲಿಗೆ 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ಹಾಗೂ ದಿನಾಂಕ: 01-06-2026 ಕ್ಕೆ 14 ವರ್ಷ ಒಳಗಿನವರಾಗಿರಬೇಕು.
ಹಿರಿಯರ ವಿಭಾಗ
ಹಿರಿಯ ವಿಭಾಗದ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2026-27 ನೇ ಸಾಲಿಗೆ ಪ್ರಥಮ ಪಿ.ಯು.ಸಿ. ಗೆ ಪ್ರವೇಶ ಪಡೆಯಲು ಅರ್ಹತೆ ಪಡೆದು, ದಿ. 01-06-2026 ಕ್ಕೆ 17 ವರ್ಷ ಒಳಗಿನವರಾಗಿರಬೇಕು.
ಸಂಬಂಧಪಟ್ಟ ಭಾಗವಹಿಸುವ ವಿದ್ಯಾರ್ಥಿಗಳು ದೃಢೀಕೃತ ಜನನ ಪ್ರಮಾಣ ಪತ್ರವನ್ನು ತರತಕ್ಕದ್ದು ಎಂದು ಪುತ್ತೂರು ತಾಲ್ಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಪ್ರಕಟಣೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲ್ಲೂಕು ಕ್ರೀಡಾಂಗಣ ಕೊಂಬೆಟ್ಟು ( 9164502107) ಇವರನ್ನು ಸಂಪರ್ಕಿಸಬಹುದು.
























