ಅಂಗಡಿಗೆ ನುಗ್ಗಿ ಮಾಲಕಿಗೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು

ಪುತ್ತೂರು: ವಸ್ತುಗಳನ್ನು ಖರೀದಿ ಮಾಡಲು ಬಂದ ಇಬ್ಬರು ಯುವಕರು ಜಗಳ ಮಾಡಿ, ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿ ಮಾಲಕಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಪಾಣಾಜೆಯ ದೈತೋಟದಲ್ಲಿ ನಡೆದಿದೆ.

ಈ ಸಂಬಂಧ ಅಂಗಡಿಯ ಮಾಲಕಿ ‌ವಿಮಲಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಜ. 18 ರಂದು ಆರ್ಲಪದವು ಕಡೆಯಿಂದ ಬಂದ ಅಜಯ್ ಮತ್ತು ಪುನೀತ್ ಎಂಬವರು ಅಂಗಡಿಗೆ ಬಂದು ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಜಗಳ ತೆಗೆದು, ಅಲ್ಲಿದ್ದ ವಸ್ತುಗಳನ್ನೆಲ್ಲಾ ಹಾಳು ಮಾಡಿದ್ದಾರೆ. ಇದರಿಂದ ಸುಮಾರು 5000 ರೂ. ಗಳಷ್ಟು ನಷ್ಟವಾಗಿದೆ. ಹಾಗೆಯೇ ಮಾಸ ಕಿ ಗೆ ‘ನೀನು ಪಂಚಾಯತ್ ಸದಸ್ಯೆ ಅಲ್ಲವೇ, ನಿನ್ನನ್ನು ಮತ್ತು ನಿನ್ನ ಅಂಗಡಿಯನ್ನು ಹುಡಿ ಮಾಡುತ್ತೇವೆ. ನಿನ್ನ ಮನೆಗೆ ಹೋಗಿ ನಿನ್ನ ಮನೆಯವರನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.





















































 
 

ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top