ಅಕ್ರಮ ಗೋಮಾಂಸ‌‌ ಸಾಗಾಟ: ಆರೋಪಿ ಜಾಹಿದ್ ಅಹ್ಮದ್ ಬಂಧನ

ಮಡಿಕೇರಿ: ವಿರಾಜಪೇಟೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನ ಬಂಧನವಾಗಿದೆ.

ಬಂಧಿತ ಆರೋಪಿಯನ್ನು ಜಾಹಿದ್ ಅಹ್ಮದ್ ಎಂದು ಗುರುತಿಸಲಾಗಿದೆ.

ಅಲ್ಟೋ – 800 ಕಾರಿನಲ್ಲಿ ಗೋಮಾಂಸವನ್ನು ಅಕ್ರಮವಾಗಿ ತುಂಬಿಕೊಂಡು ಗೋಣಿಕೊಪ್ಪಲಿನಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಲೆಗೆ ಕೆಡಹಿದ್ದಾರೆ. ಕಾರಿನಲ್ಲಿ 150 KG ಗೋಮಾಂಸ ಪತ್ತೆಯಾಗಿದೆ. ಹುಣಸೂರಿನ ರತ್ನಗಿರಿಯಿಂದ ಗೋಮಾಂಸ ತಂದು ವಿರಾಜಪೇಟೆ ಪರಿಸರದಲ್ಲಿ ಮಾರಾಟ ನಡೆಸುವ ಕೆಲಸವನ್ನು ಈ ಖದೀಮ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.





















































 
 

ಕಾರು, ಗೋಮಾಂಸವನ್ನು ಜಪ್ತಿ ‌ಮಾಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

error: Content is protected !!
Scroll to Top