ಸುಳ್ಯ: ನಿಯಂತ್ರಣ ತಪ್ಪಿ ಬೆಳ್ಳಾರೆ ರಸ್ತೆಯ ಕಲ್ಲೋಣಿ ಎಂಬಲ್ಲಿನ ಅಪಾಯಕಾರಿ ತಿರುವಿನಲ್ಲಿ ಮೋರಿಗೆ ಬೈಕ್ ಬಿದ್ದ ಪರಿಣಾಮ ಮಗ ಮೃತಪಟ್ಟಿದ್ದು, ತಂದೆ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಘಟನೆ ನಡೆದಿದೆ.
ಕಡಬದ ಮರ್ಧಾಳ ಸಮೀಪದ ನಿಶಾಂತ್(24) ಮೃತಪಟ್ಟಿದ್ದು, ಬೈಕಿನಲ್ಲಿದ್ದ ಅವರ ತಂದೆ ಮೋನಪ್ಪ ಅವರಿಗೆ ಗಂಭೀರ ಪ್ರಮಾಣದಲ್ಲಿ ಗಾಯಗಳಾಗಿವೆ.
ತಂದೆ ಮತ್ತು ಮಗ ಶಬರಿಮಲೆಯ ಪ್ರಸಾದವನ್ನು ಸಂಬಂಧಿಕರಿಗೆ ನೀಡಲು ಸುಳ್ಯಕ್ಕೆ ಬೈಕ್ ಮೂಲಕ ತೆರಳುತ್ತಿದ್ದರು. ತಿರುವಿನಲ್ಲಿ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಗಾಯಾಳು ಮೋನಪ್ಪ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























