ಕಾಳುಮೆಣಸು ಕೊಯ್ಯಲು ಮರ ಏರಿದಾಗ ಸಂಭವಿಸಿದ ದುರ್ಘಟನೆ
ಪುತ್ತೂರು : ನಿವೃತ್ತ ಶಿಕ್ಷಕರೊಬ್ಬರು ತೆಂಗಿನಮರದಿಂದ ಬಿದ್ದು ಮೃತಪಟ್ಟಿರುವ ದುರ್ಘಟನೆ ಬೆಟ್ಟಂಪಾಡಿಯಲ್ಲಿ ಸೋಮವಾರ ಸಂಭವಿಸಿದೆ. ಬೆಟ್ಟಂಪಾಡಿ ಗ್ರಾಮದ ಗುಮ್ಮಟಿಗದ್ದೆ ನಿವಾಸಿ ನಾರಾಯಣ ನಾಯ್ಕ ಪೈಂತಿಮುಗೇರು ಮೃತಪಟ್ಟಿರುವ ವ್ಯಕ್ತಿ.
ಗುಮ್ಮಟಿಗದ್ದೆಯಲ್ಲಿ ಸೋಮವಾರ ಕಾಳುಮೆಣಸು ಕೀಳಲೆಂದು ತೆಂಗಿನಮರ ಏರಿದ್ದ ನಾರಾಯಣ ನಾಯ್ಕ ಬಿದ್ದು ಮೃತಪಟ್ಟಿದ್ದಾರೆ. ಅಲ್ಯುಮಿನಿಯಂ ಏಣಿ ಇಟ್ಟು ಅವರು ಕಾಳುಮೆಣಸು ಕೊಯ್ಯುತ್ತಿದ್ದರು. ಈ ವೇಳೆ ಏಣಿ ಜಾರಿ ಏಣಿ ಸಮೇತ ಬಿದ್ದ ನಾರಾಯಣ ನಾಯ್ಕ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
























