ಲಕ್ನೋ: ವಾರಣಾಸಿಯಲ್ಲಿ ಯಾವುದೇ ರೀತಿಯ ದೇವಾಲಯವನ್ನಾಗಲಿ, ಐತಿಹಾಸಿಕ ಪ್ರತಿಮೆಯನ್ನಾಗಲಿ ಕೆಡವಿಲ್ಲ. ಕಾಶಿಯ ಗೌರವವನ್ನು ಹಾಳು ಮಾಡುವ ಉದ್ದೇಶದಿಂದ ಕಾಂಗ್ರೆಸ್ ವಿವಾದ ಸೃಷ್ಟಿ ಮಾಡುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರು ತಿಳಿಸಿದ್ದಾರೆ.
ಮಣಿಕರ್ಣಿಕಾ ಘಾಟ್ ನವೀಕರಣಕ್ಕೆ ಸಂಬಂಧಿಸಿದ ಹಾಗೆ ಎದ್ದಿರುವ ಪ್ರಶ್ನೆಗಳಿಗೆ ಅವರು ಸ್ಪಷ್ಟನೆ ನೀಡಿರುವುದಾಗಿದೆ.
ಘಾಟ್ ಅಭಿವೃದ್ಧಿ ಸಮಯದಲ್ಲಿ ಮರಾಠಾ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ ಎಂಬ ಆರೋಪದ ಸುಳ್ಳು. ಆ ವಿಡಿಯೋವನ್ನು AI ಕೃತಕ ಬುದ್ಧಿಮತ್ತೆ ಆಧರಿಸಿ ಮಾಡಲಾಗಿದೆ. ಪ್ರತಿಮೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.
ಈ ವಿಡಿಯೋದಿಂದ ಅನಧಿಕೃತ ಗೊಂದಲ ಉಂಟಾಗಿದೆ. ಈ ಎಲ್ಲಾ ಷಡ್ಯಂತ್ರಗಳ ಹಿಂದಿನ ಕೈಗಳನ್ನು ಬಹಿರಂಗ ಮಾಡುವ ಅಗತ್ಯವಿದೆ. ಜನರನ್ನು ದಾರಿ ತಪ್ಪಿಸಲು ಇಂತಹ ಕೆಲಸಗಳನ್ನು ವಿರೋಧಿಗಳು ಮಾಡುತ್ತಿದ್ದಾರೆ. ಕಾಶಿಯ ಪಾವಿತ್ರ್ಯ ಕಾಪಾಡುವ ದೃಷ್ಟಿಯಿಂದ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ನಿಜ ವಿಚಾರವನ್ನು ಸಮಾಜದ ಮುಂದೆ ಇಡುತ್ತೇವೆ ಎಂದು ಹೇಳಿದ್ದಾರೆ.
























