ಕರಿಮಣಿಗಾಗಿ ‌ವೃದ್ಧೆಯ ಕೊಲೆ: ಆರೋಪಿ ಕುಂಬಳೆ ಪೊಲೀಸರ ಅತಿಥಿ

ಕಾಸರಗೋಡು: ತನ್ನ ಆರ್ಥಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು 72 ವರ್ಷದ ವೃದ್ಧೆಯ ಕರಿಮಣಿ ಎಗರಿಸಲು ಆಕೆಯನ್ನು ಕೊಲೆಗೈದ ಆರೋಪಿ ಕುಂಬಳೆ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

ಮೊವ್ವಾರಿನ ಅಜಿಲದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪುಷ್ಪಲತಾ ಶೆಟ್ಟಿ ಅವರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಎಗರಿಸಲು ಅದೇ ಪ್ರದೇಶದಲ್ಲಿ ಹುಲ್ಲು ಕೀಳುವ ಕೆಲಸ ಮಾಡುತ್ತಿದ್ದ ಪೆರಡಾಲ ನಿವಾಸಿ ಪರಮೇಶ್ವರ ಯಾನೆ ರಮೇಶ್ ನಾಯಕ್ (47) ಪ್ರಯತ್ನ ನಡೆಸಿದ್ದ. ಈ ವೇಳೆ ವೃದ್ಧೆ ವಿರೋಧ ವ್ಯಕ್ತಪಡಿಸಿದ್ದು, ಆ ಸಂದರ್ಭದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದ.

ಪುಷ್ಪಲತಾ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದಾಗ ಪೊಲೀಸರಿಗೆ ಅದೊಂದು ಕೊಲೆ ಎಂಬ ಅನುಮಾನ ಕಾಡಿತ್ತು. ಅವರ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿ ಉಸಿರುಗಟ್ಟಿ ‌ಮೃತಪಟ್ಟಿರುವುದು ತಿಳಿದು ಬಂದಿತ್ತು. ಪ್ರಕರಣ ದಾಖಲಿಸಿದ ಪೊಲೀಸರು ಆ ಪರಿಸರದ ಮತ್ತು ಅವರ ಮನೆಯ ಸಮೀಪ ಬಂದು ಹೋದವರ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಆ ವೇಳೆ ಆರೋಪಿ ಪರಮೇಶ್ವರ ಸಹ ಆ ಪ್ರದೇಶದಲ್ಲಿ ಹುಲ್ಲು ಕೀಳುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು.





















































 
 

ಅದರನ್ವಯ ಆತನನ್ನು ಕರೆದು ಪೊಲೀಸರು ವಿಚಾರಣೆ ಮಾಡಿದ್ದಾರೆ. ಆ ವೇಳೆ ಆತನ ಮೈಯಲ್ಲಿ ಗಾಯಗಳು ಕಂಡು ಬಂದಿದ್ದು, ಅದು ಕಾಳುಮೆಣಸು ಕೊಯ್ಯುವಾಗ ಆಗಿದ್ದಾಗಿ ಹೇಳಿದ್ದ. ಆದರೆ ಪೊಲೀಸರು ಬೆಂಡೆತ್ತಿದಾಗ ಆತ ಸತ್ಯಾಂಶ ಒಪ್ಪಿಕೊಂಡಿದ್ದಾರೆ. ತನಗೆ ಆರ್ಥಿಕ ಸಂಕಷ್ಟ ಇದ್ದು ಅದಕ್ಕಾಗಿ ಕಳ್ಳತನ ಮಾಡಲು ಹೋದಾಗ ಪುಷ್ಪಲತಾ ಪ್ರತಿರೋಧಿಸಿದ್ದು, ಆ ವೇಳೆ ಆಕೆಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ.

error: Content is protected !!
Scroll to Top