ಎ.ಆರ್. ರೆಹಮಾನ್ ಮಾತೃ ಧರ್ಮಕ್ಕೆ ಮರಳಿದರೆ ಕೆಲಸ ಸಿಗಬಹುದು: ವಿಎಚ್‌ಪಿ ತಿರುಗೇಟು

ಮುಂಬೈ: ಪ್ರಖ್ಯಾತ ಸಂಗೀತಗಾರ ಎ.ಆರ್. ರೆಹಮಾನ್ ಅವರಿಗೆ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದು, ‘ಕೋಮುವಾದಿ ಮನಸ್ಥಿತಿಯಿಂದ ಬಾಲಿವುಡ್‌ನಲ್ಲಿ ಸಂಗೀತ ಅವಕಾಶಗಳು ಸಿಗುತ್ತಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ವಿಶ್ವ ಹಿಂದೂ ಪರಿಷತ್, ‘ಘರ್ ವಾಪಸಿ ಮಾಡಿದರೆ ಅವಕಾಶಗಳು ಸಿಗುತ್ತವೆ’ ಎಂದು ಸಲಹೆ ನೀಡಿದೆ. ಬಹುಶಃ ಅವರು ಒಂದು ಕೋಮಿನ ವಿಷಯದಿಂದಾಗಿ ಅವರು ಕಳೆದ ಎಂಟು ವರ್ಷಗಳಿಂದ ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸ ಕಳೆದುಕೊಂಡಿರಬಹುದು. ಸಂಯೋಜಕರು ಒಂದು ನಿರ್ಧಿಷ್ಟ ಬಣದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಈ ಸಂಗೀತ ಸಂಯೋಜಕನನ್ನು ಭಾರತೀಯರು ಮತ್ತು ಹಿಂದೂಗಳು ಆರಾಧಿಸುತ್ತಿದ್ದರು. ಆದರೆ ಈಗ ಅವರು ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿ ಕೆಣಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರೆಹಮಾನ್ ಹಿಂದೂ ಆಗಿದ್ದರು. ಅವರು ಇಸ್ಲಾಂ‌ಗೆ ಏಕೆ ಮತಾಂತರವಾದರು. ಅವರು ಮತ್ತೆ ಮಾತೃ ಧರ್ಮಕ್ಕೆ ಮರಳಲಿ. ಆಗ ಅವರಿಗೆ ಮತ್ತೆ ಕೆಲಸ ದೊರೆಯಬಹುದು ಎಂದು ವಿಎಚ್‌ಪಿ ಹೇಳಿದೆ.





















































 
 

error: Content is protected !!
Scroll to Top