ಜ.17-ಜ.25: ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಾಕದಲ್ಲಿ ವಾರ್ಷಿಕ ಜಾತ್ರೋತ್ಸವ

ಕಡಬ: ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಾಕ, ಇರ್ವೆರ್ ಉಳ್ಳಾಕುಲ ದೈವಗಳ ಕ್ಷೇತ್ರ ಅಮರಕಾಸ್ಪಾಡಿಯಲ್ಲಿ ಜ. 17 – ಜ.25 ರ ವರೆಗೆ ವರ್ಷಾವಧಿ ಜಾತ್ರೋತ್ಸವ, ದೈವಗಳ ನೇಮ ನಡೆಯಲಿದೆ.

ಜಾತ್ರಾ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜ.20 ರಂದು ಶ್ರೀ ದೇವರ ದರ್ಶನ ಬಲಿ ನಡೆಯಲಿದೆ. ಜ.22 ರಿಂದ ಜ. 25 ರ ವರೆಗೆ ದೈವಗಳ ನೇಮ ನಡೆಯಲಿದೆ.

ಕಾರ್ಯಕ್ರಮಗಳ ವಿವರ:





















































 
 

ಜ.16: ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ದಿ, ವಾಸ್ತು ರಕ್ಷೆೋಘ್ನ ಹೋಮ, ವಾಸ್ತು ಬಲಿಪೂಜೆ

ಜ.17: ಪೂರ್ವಾಹ್ನ ಗಂಟೆ 9-00: ಇರ್ವೆರ್ ಉಳ್ಳಾಕುಲ ಕ್ಷೇತ್ರ ಅಮರ ಕಾಸ್ಟಾಡಿಯಿಂದ ದೇವಸ್ಥಾನಕ್ಕೆ ದೈವಗಳ ಭಂಡಾರ ಬರುವುದು.

ಪೂರ್ವಾಹ್ನ ಗಂಟೆ 10-00 : ಧ್ವಜಾರೋಹಣ, ದೇವರ ಬಲಿ, ಮಹಾಪೂಜೆ

ಸಂಜೆ 5-30 ರಿಂದ 6-30 : ಭಜನೆ

ರಾತ್ರಿ ಗಂಟೆ 7-00 : ನಿತ್ಯ ಬಲಿ, ವಸಂತಕಟ್ಟೆ ಪೂಜೆ, ಪೇಟೆ ಸವಾರಿ-ನಾಲ್ಕಂಬ ಕಟ್ಟೆಪೂಜೆ ಮತ್ತು ಮುದುವ, ಅಧಿಕಾರ – ಬಾರೆಂಗಳಗುತ್ತು, ಚಿತ್ತೋಡಿ-ಕಲಾಯಿ ಕಟ್ಟೆಪೂಜೆಯಾಗಿ ಹಿಂತಿರುಗಿ ದೇವಸ್ಥಾನಕ್ಕೆ

ಜ.18: ಪೂರ್ವಾಹ್ನ ಗಂಟೆ 8-00 : ನಿತ್ಯಬಲಿ, ಮಹಾಪೂಜೆ

ಪೂರ್ವಾಹ್ನ ಗಂಟೆ 9-00 : ಏಕದಶರುದ್ರಾಭಿಷೇಕ, ಹಂಸವಾಧೀಶ್ವರೀ ಹೋಮ (ಅಷ್ಠಮಂಗಲದ ಪ್ರಶ್ನಾಚಿಂತನಾ ಪರಿಹಾರದ ಪ್ರಯುಕ್ತ)

ಸಂಜೆ 5-30 ರಿಂದ 6-30 : ಭಜನೆ

ರಾತ್ರಿ ಗಂಟೆ 7-00: ನಿತ್ಯಬರಿ, ವಸಂತಕಟ್ಟೆ ಪೂಜೆ. ಪೇಟೆ ಸವಾರಿ, ವಾಲಸರಿ ಕಟ್ಟೆಯಿಂದ ಆಯೋಧನಗರ- ದೇವರಗುಡ್ಡೆ ಎರ್ಕ, ಎಣ್ಣೂರು ಕಟ್ಟೆಯವರೆಗೆ ಸವಾರಿ ಹಿಂತಿರುಗಿ ದೇವಸ್ಥಾನಕ್ಕೆ

ಜ. 19: ಪೂರ್ವಾಹ್ನ ಗಂಟೆ 8-00: ನಿತ್ಯ ಬಲಿ, ಮಹಾಪೂಜೆ

ಪೂರ್ವಾಹ್ನ ಗಂಟೆ 9-00 : ಮೃತ್ಯುಂಜಯ ಹೋಮ (ಅಷ್ಟಮಂಗಲದ ಪ್ರಶ್ನಾಚಿಂತನಾ ಪರಿಹಾರದ ಪ್ರಯುಕ್ತ)

ಸಂಜೆ ಗಂಟೆ 5-00ರಿಂದ 7-00ರ ವರೆಗೆ : ಸಾಂಸ್ಕೃತಿಕ ಕಾರ್ಯಕ್ರಮ – ಚಾರ್ವಾಕ ಶಾಲಾ ಮಕ್ಕಳಿಂದ

ರಾತ್ರಿ 7-00 : ಮಹಾರಂಗಪೂಜೆ, ಉತ್ಸವ ಬಲಿ, ಶ್ರೀ ದೇವರ ಪಲ್ಲಕ್ಕಿ ಉತ್ಸವ

ರಾತ್ರಿ ಗಂಟೆ 9-00: ದೇವರ ಚಂದ್ರಮಂಡಲ ರಥೋತ್ಸವ

ಜ.20: ಪೂರ್ವಾಹ್ನ ಗಂಟೆ 10-00 : ನಿತ್ಯಬಲಿ, ದರ್ಶನ ಬಲಿ, ದೈವಗಳ ಭೇಟಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ

ಸಂಜೆ 5-30 ರಿಂದ : ಜಿಲ್ಲೆಯ ಆಹ್ವಾನಿತ ಭಜನಾ ಮಂಡಳಿಗಳಿಂದ ಕುಣಿತ ಭಜನೋತ್ಸವ

ರಾತ್ರಿ ಗಂಟೆ 8-00 : ದೈವದೇವರ ಭೇಟಿ, ಕಲಾಯಿ ರಥ ಕಟ್ಟೆಪೂಜೆ, ಚಾಮುಂಡಿ ನೇಮ

ರಾತ್ರಿ 9-30 : ಉತ್ಸವ ಬಲಿ, ಅಷ್ಠಾವಧಾನ ಸೇವೆ, ಸುಡುಮದ್ದು ಪ್ರದರ್ಶನ, ಶಯನ

ಜ.21: ಪೂರ್ವಾಹ್ನ ಗಂಟೆ 8-30 : ಕವಟೋದ್ಘಾಟನೆ. ಕಲಶಾಭಿಷೇಕ

ಸಂಜೆ 4-00 : ದೇವಳದಿಂದ ಹೊರಟು ಕಾಸ್ಟಾಡಿ – ದೇವಿನಗರ – ಇಡ್ಯಡ್ಕ ಕುಮಾರಧಾರ ನದಿಗೆ ಅವಕೃತ ಸ್ನಾನಕ್ಕೆ ಹೊರಡುವುದು ಹಿಂತಿರುಗಿ ಬಂದು ಬಟ್ಟಲು ಕಾಣಿಕೆ ಧ್ವಜಾವರೋಹಣ

ರಾತ್ರಿ ಗಂಟೆ 7-00ರಿಂದ : ಯಕ್ಷಗಾನ ಬಯಲಾಟ – ಗೆಜ್ಜೆಗಿರಿ ಮೇಳ ಮತ್ತು ಅತಿಥಿ ಕಲಾವಿದರಿಂದ
ಸಂಯೋಜಕರು : ಶ್ರೀ ಗೋಪಾಲಕೃಷ್ಣ ಪಟೇಲ್ ಚಾರ್ವಾಕ

ರಾತ್ರಿ ಗಂಟೆ 9-00ರಿಂದ : ಧಾರ್ಮಿಕ ಸಭೆ

ಜ.22: ಪೂರ್ವಾಹ್ನ ಗಂಟೆ 8-30ರಿಂದ : ಕಲಶಾಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ

ಅಮರ ಕಾಸ್ಪಾಡಿ ಇರ್ವೆರ್ ಉಳ್ಳಾಕುಲ ನೇಮೋತ್ಸವ

ಜ.22: ಪೂರ್ವಾಹ್ನ ಗಂಟೆ 8-00 : ಗೊನೆ ಕಡಿಯುವುದು

ಪೂರ್ವಾಹ್ನ ಗಂಟೆ 10-00 : ಭಂಡಾರ ತೆಗೆದು ಮುಂಡ್ಯೆ ಮಜಲಲ್ಲಿ ಮುಂಡ್ಯೆ ಹಾಕುವುದು

ರಾತ್ರಿ 7-00 : ಶ್ರೀ ದೈವಗಳ ವಾಲಸರಿ

ಜ.23: ರಾತ್ರಿ ಗಂಟೆ 6-30 : ದೈವಗಳ ಬಂಡಿ ಉತ್ಸವ, ಪೂಮಾಣಿ ದೈವ ಮತ್ತು ಪೂವಲಂಕಮ್ಮ ದೆಯ್ಯರ ನೇಮ (ಕೀಲೆ ಮಾಡದಲ್ಲಿ)

ಜ.24: ಬೆಳಗ್ಗೆ 10-00 : ದೈವಗಳ ಬಂಡಿ ಉತ್ಸವ, ಕಿನ್ನಿಮಾಣಿ ದೈವದ ನೇಮೋತ್ಸವ, ಚಂದುನಾಯರ್. ಮರ್ಲ್ಮಾಣಿ, ಹಳ್ಳತ್ತಾಯ ಹಾಗೂ ಇತರ ಉಪದೈವಗಳ ನೇಮೋತ್ಸವ (ಕಳಂಗಾಜೆ ಮಾಡದಲ್ಲಿ) –

ಜ.25: ಬೆಳಗ್ಗೆ 10-00: ಅಮ್ಮನವರ ಪೂಜೆ ಮತ್ತು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೈವ ದೇವರುಗಳ ಕೃಪೆಗೆ ಪಾತ್ರರಾಗುವಂತೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!
Scroll to Top