ಮಂಡ್ಯ: ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಾಗಿದ್ದ ಯುವಕನನ್ನು ಆತನ ಅಣ್ಣ ಮತ್ತು ಮಕ್ಕಳು ಸೇರಿ ಇರಿದು ಹತ್ಯೆ ಮಾಡಿದ ಘಟನೆ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ.
ಯೋಗೇಶ್ (30) ಮೃತ ದುರ್ದೈವಿ. ಯೋಗೇಶ್ಗೆ ಜ.21 ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಗೂ ಮೊದಲೇ ತನ್ನ ಅಣ್ಣನಿಂದಲೇ ಈತ ಮಸಣ ಸೇರಿದ್ದಾನೆ.
ಆರೋಪಿಗಳನ್ನು ಲಿಂಗರಾಜು ಮತ್ತು ಅವನ ಮಕ್ಕಳಾದ ಭರತ್, ದರ್ಶನ್ ಎಂದು ಗುರುತಿಸಲಾಗಿದೆ.. ಅಣ್ಣ ತಮ್ಮಂದಿರ ನಡುವೆ ಹಲವು ವರ್ಷಗಳಿಂದ ಆಸ್ತಿ ಕಲಹ ಇತ್ತು. ಈ ವಿಚಾರವಾಗಿ ಆಗಾಗ್ಗೆ ಕುಟುಂಬ ಕಲಹ ಸಹ ನಡೆಯುತ್ತಿತ್ತು. ಅದೇ ಕಾರಣಕ್ಕೆ ಆತನ ಕೊಲೆ ನಡೆಸಿರಬಹುದು ಎಂದು ಹೇಳಲಾಗುತ್ತಿದೆ.
ಆದರೂ ಯೋಗೇಶ್ ತನ್ನ ಲಗ್ನ ಪತ್ರಿಕೆಯಲ್ಲಿ ಅಣ್ಣನ ಹೆಸರನ್ನು ಹಾಕಿ ಊರಿಗೆಲ್ಲಾ ಹಂಚಿದ್ದ. ಆದರೆ ಅದೇ ಅಣ್ಣ ಅವನ ಬಾಳಿಗೆ ಯಮಸ್ವರೂಪಿಯಾಗಿದ್ದು ಮಾತ್ರ ದುರದೃಷ್ಟವೇ ಸರಿ.
























