ಹಣದ ವಿಚಾರಕ್ಕೆ ಹಲ್ಲೆ: ದೂರು ದಾಖಲು

ರಾಮಕುಂಜ: ಹಣದ ವಿಚಾರಕ್ಕೆ ಸಂಬಂಧಿಸಿದ ಹಾಗೆ ರಾಮಕುಂಜದ ಕುಂಡಡ್ಕಕ್ಕೆ ಬರಲು ಹೇಳಿ ತಗಾದೆ ತೆಗೆದು, ಹಲ್ಲೆ ನಡೆಸಿರುವ ಬಗ್ಗೆ ಕಡು ಪೊಲೀಸ್ ಠಾಣೆಗೆ ಸವಣೂರು ಚಾಪಳ್ಳಿ ನಿವಾಸಿ ಅಬ್ದುಲ್ ಖಾದರ್ ಎಂಬವರು ದೂರು ನೀಡಿದ್ದಾರೆ.

ಆರೋಪಿಗಳಾದ ಕೃಷ್ಣಪ್ಪ, ಗಂಗಾಧರ, ಆರಿಫ್, ಸದಾಶಿವ ಎಂಬವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಖಾದರ್ ತಿಳಿಸಿದ್ದಾರೆ.

ಕೃಷ್ಣಪ್ಪ ಎಂಬವರು ಖಾದರ್ ಅವರಿಗೆ ಪರಿಚಯಸ್ಥರಾಗಿದ್ದು ಫೋನ್ ಮೂಲಕ ಕುಂಡಡ್ಕದ ಕೇಶವ ಎಂಬವರ ಮನೆಯ ಪಕ್ಕ ಬನ್ನಿ, ಹಣಕಾಸಿಗೆ ಸಂಬಂಧಿಸಿದಂತೆ ಮಾತನಾಡುವುದಾಗಿ ಕರೆದಿದ್ದರು. ಅದರಂತೆ ಖಾದರ್ ಅವರು ಸಂದೇಶ್ ಎಂಬವರ ಜೊತೆಗೆ ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ ಗಂಗಾಧರ್ ಅವರು ಮರದ ಸಲಾಕೆಯಿಂದ ತಲೆಯ ಹಿಂಭಾಗಕ್ಕೆ, ಕೃಷ್ಣಪ್ಪ ಅವರು ಪ್ಲಾಸ್ಟಿಕ್ ಚಯರ್ ಬಳಸಿ ಹಲ್ಲೆ ನಡೆಸಿದ್ದಾರೆ. ಆರಿಫ್ ಮತ್ತು ಸದಾಶಿವ ಮುಖಕ್ಕೆ ಬಟ್ಟೆ ಸುತ್ತಿ ಗುದ್ದಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಸಂದೇಶ್ ಅವರು ಜಗಳ ಬಿಡಿಸಲು ಪ್ರಯತ್ನ ಮಾಡಿದ್ದಾರೆ.





















































 
 

ಖಾದರ್ ಅವರು ತಪ್ಪಿಸಿಕೊಂಡು ಓಡಿ ಹೋಗಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಗಿ ತಿಳಿದು ಬಂದಿದೆ.

error: Content is protected !!
Scroll to Top