ಚಿರತೆ ದಾಳಿ: ಕೂದಲೆಳೆ ಅಂತರದಿಂದ ತಪ್ಪಿಸಿ ಜೀವ ಉಳಿಸಿಕೊಂಡ ವ್ಯಕ್ತಿ

Leopard attack

ಬೆಳ್ತಂಗಡಿ: ಕನ್ಯಾಡಿ ಗ್ರಾಮದ ಅಂಡೀರುಮಾರುವಿನಲ್ಲಿ ಚಿರತೆಯ ದಾಳಿಯಿಂದ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.

ಮಂಜಪ್ಪ ನಾಯ್ಕ(62) ಎಂಬವರೇ ಚಿರತೆಯ ಭೀಕರ ದಾಳಿಗೆ ತುತ್ತಾಗಿ ಪಾರಾದ ವ್ಯಕ್ತಿ.

ಮನೆಯ ಅಂಗಳದಲ್ಲಿದ್ದ ಮಂಜಪ್ಪ ಅವರ ಮೇಲೆ ಚಿರತೆಯೊಂದು ಏಕಾಏಕಿ ದಾಳಿ ನಡೆಸಿದೆ. ತಕ್ಷಣವೇ ಅವರು ಪಕ್ಕದಲ್ಲಿದ್ದ ಅಡಿಕೆ ಮರವನ್ನು ಏರಿ ಜೀವ ರಕ್ಷಣೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿರತೆ ಅವರ ಕಾಲಿಗೆ ಕಚ್ಚಿದ್ದು, ಗಂಭೀರ ಪ್ರಮಾಣದ ಗಾಯಗಳಾಗಿವೆ.





















































 
 

ಗಾಯಾಳು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ವಲಯ ಅರಣ್ಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳ ಜೊತೆಗೆ ವಾಗ್ವಾದ ಸಹ ನಡೆಯಿತು.

error: Content is protected !!
Scroll to Top