ಹಿಂದೂ ಹುಡುಗಿಗೆ ಬಲವಂತಾಗಿ ಬುರ್ಖಾ ತೊಡಿಸಿದ ಸ್ನೇಹಿತೆಯರು : ವಿಡಿಯೋ ವೈರಲ್‌

ಇದನ್ನು ಧರಿಸು, ಚೆನ್ನಾಗಿ ಕಾಣುತ್ತದೆ ಎಂದು ಹೇಳಿದ ಗೆಳತಿಯರು

ಲಖನೌ : ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಮುಸ್ಲಿಂ ಸ್ನೇಹಿತೆಯರ ಗುಂಪೊಂದು ಹಿಂದೂ ಹುಡುಗಿಗೆ ಬಲವಂತವಾಗಿ ಬುರ್ಖಾ ತೊಡಿಸಿರುವ ವಿಡಿಯೋವೊಂದು ವೈರಲ್ ಆಗಿ ವಿವಾದ ಸೃಷ್ಟಿಸಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನ ಬಿಲಾರಿ ಪ್ರದೇಶದ ಸಾಹುಕುಂಜ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಬುರ್ಖಾ ಧರಿಸಿದ ಕೆಲವು ಹುಡುಗಿಯರು ಸರಳ ಉಡುಪಿನಲ್ಲಿರುವ ಹಿಂದೂ ಹುಡುಗಿಯನ್ನು ಬುರ್ಖಾ ಧರಿಸಲು ಒತ್ತಾಯಿಸುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಹುಡುಗಿ ನಿರಾಕರಿಸಿದಾಗ, ಅವರು “ಇದನ್ನು ಧರಿಸು, ಚೆನ್ನಾಗಿ ಕಾಣುತ್ತದೆ” ಎಂದು ಹೇಳುತ್ತಾರೆ.
ಈ ಮಧ್ಯೆ, ಹುಡುಗಿ “ಯಾರಾದರೂ ಬರುತ್ತೀರಾ?” ಎಂದು ಕೇಳುತ್ತಾಳೆ, ಅವಳಿಗೆ “ಯಾರೂ ಬರುತ್ತಿಲ್ಲ” ಎಂದು ಹೇಳುತ್ತಾರೆ. ಆಕೆಯ ಸ್ನೇಹಿತರು ಬುರ್ಖಾ ಧರಿಸಲು ಒತ್ತಾಯಿಸುತ್ತಾರೆ. ಈ ವೇಳೆ ಮತ್ತೋರ್ವ ಬುರ್ಖಾದಾರಿ ಮಹಿಳೆ ಬಂದಾಗ ಈಕೆ ಮುಂದಕ್ಕೆ ಸಾಗುತ್ತಾಳೆ.





















































 
 

ವಿದ್ಯಾರ್ಥಿನಿಯರ ಈ ಕೃತ್ಯ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ಟ್ಯೂಷನ್ ಆಡಳಿತ ಮಂಡಳಿ ಸ್ಫಷ್ಟನೆ ನೀಡಿದೆ. ಇದು ಬುರ್ಖಾ ಧರಿಸಲು ಒತ್ತಾಯಿಸಿದ್ದಲ್ಲ.. ಬದಲಿಗೆ ವಿದ್ಯಾರ್ಥಿನಿಯರು ಗಲಾಟೆ ಮಾಡಿಕೊಂಡ ವಿಡಿಯೋ ಎಂದು ಹೇಳಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೊರಾದಾಬಾದ್ ಪೊಲೀಸರು ವೈರಲ್ ವೀಡಿಯೊ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಕೋಮು ಸೌಹಾರ್ದ ವಾತಾವರಣ ಕೆಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ವೀಡಿಯೊ ಡಿಸೆಂಬರ್ 20, 2025ರಂದು ಸೆರೆಯಾಗಿದ್ದು, ವೀಡಿಯೊ ಈಗ ಕೋಮು ಮತ್ತು ಸಾಮಾಜಿಕ ಚರ್ಚೆಯ ಕೇಂದ್ರವಾಗಿದೆ. ಈ ಘಟನೆಯು ವಸತಿ ಪ್ರದೇಶಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ತರಬೇತಿ ಕೇಂದ್ರಗಳ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಉದ್ದೇಶಪೂರ್ವಕ ಪಿತೂರಿಯಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ವೀಡಿಯೊದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೀಡಿಯೊದಲ್ಲಿ ಕಂಡುಬರುವ ವಿದ್ಯಾರ್ಥಿಗಳನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

error: Content is protected !!
Scroll to Top