ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಶತ ಜಯಘೋಷ ಪಥಸಂಚಲನ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘವು ಈ ಬಾರಿಯೂ ಕೇಸರಿ ಸಂತ ವಿವೇಕಾನಂದರ ಜಯಂತಿಯನ್ನು ‌ವಿಶೇಷವಾಗಿ ಆಚರಿಸಿದ್ದು, ಆ ಪ್ರಯುಕ್ತ ಇಂದು ಸಂಘದ ಸಮೂಹ ಸಂಸ್ಥೆಗಳು ಶತ ಜಯಘೋಷ್ ಪರಿಕಲ್ಪನೆಯಡಿ ಪಥಸಂಚಲನ ನಡೆಸಿದವು.

ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲಾ ಶಾಲೆಗಳ ಸುಮಾರು 1500 ವಿದ್ಯಾರ್ಥಿಗಳು ಈ ವಿಶೇಷ ಪಥಸಂಚಲನದಲ್ಲಿ ಭಾಗವಹಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್. ಮಾಜಿ ಶಾಸಕ ಸಂಜೀವ ಮಠಂದೂರು ಪುತ್ತೂರಿನ ಅಟಲ್ ಉದ್ಯಾನ ಕೊಂಬೆಟ್ಟು‌ವಿನಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಪಥಸಂಚಲನಕ್ಕೆ ಚಾಲನೆಯನ್ನು ನೀಡಿದರು. ನಂತರ ಕಲ್ಲಾರೆ ಹಾಗೂ ಬೊಳುವಾರಿನಿಂದ ಏಕಕಾಲದಲ್ಲಿ ಪಥಸಂಚಲನ ಆರಂಭಗೊಂಡು ಪುತ್ತೂರಿನ ಮುಖ್ಯರಸ್ತೆಯಿಂದ ಸಂಚರಿಸಿ, ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾಪ್ತವಾಯಿತು.





















































 
 

ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಪಥಸಂಚಲನಕ್ಕೆ ಪುಷ್ಪ ಗೌರವ ಸಲ್ಲಿಸಿ, ಕೇಸರಿ ಸಂತನಿಗೆ ತಮ್ಮ ನಮನಗಳನ್ನು ‌ಸಮರ್ಪಿಸಿದರು.

error: Content is protected !!
Scroll to Top