ಬಾರ್ಯ ಕ್ಷೇತ್ರದಲ್ಲಿ ಡಾ. ಯೋಗಿಂದ್ರ ಭಟ್ ಅವರಿಗೆ ಅಭಿನಂದನೆ

ಉಪ್ಪಿನಂಗಡಿ: ಅಮೆರಿಕಾದ ಫ್ಲೋರಿಡಾದ ಯೋಗ ಯುನಿವರ್ಸಿಟಿಯಿಂದ ಉಪವಾಸ ಮತ್ತು ಆಧ್ಯಾತ್ಮಿಕ ಪ್ರಗತಿ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಡಾ.ಯೋಗಿಂದ್ರ ಭಟ್ ಇವರಿಗೆ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಇಂಜಿನಿಯರ್ ಯಜ್ಞೇಶ್ ಪುತ್ತಿಲ ನೇತೃತ್ವದಲ್ಲಿ ಅಭಿನಂದನಾ ಸಮಾರಂಭ ಜರಗಿತು.

ದೇವಳದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆ ವಹಿಸಿದ್ದರು ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು.

ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಪುರುಷೋತ್ತಮ ಭಂಡಾರಿ ಮಂಗಳೂರು ಸುದೇಶ್ ರೈ ಮಂಗಳೂರು, ಅರ್ಚಕ ಗುರುಪ್ರಸಾದ್ ನೂರಿತ್ತಾಯ, ಸೂರ್ಯನಾರಾಯಣ ಕುದ್ದಣ್ಣಾಯ, ಸೇಸಪ್ಪ ಸಾಲಿಯನ್, ಕುಶಾಲಪ್ಪ ಗೌಡ, ವಿಠಲದಾಸ ಕಲ್ಲೂರಾಯ,ಸುಬ್ರಹ್ಮಣ್ಯ ಬಾರಿತ್ತಾಯ, ದಾಮೋದರ ನಾಯಕ್, ಮನೋಹರ ಶೆಟ್ಟಿ, ಯೋಗೇಂದ್ರ ಭಟ್ ಅವರ ಅಭಿಮಾನಿ ಬಳಗದವರು ಹಾಗೂ ಆಡಳಿತ ಸೇವಾ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು





















































 
 

ಆಮಂತ್ರಣ ಪತ್ರಿಕೆ ಬಿಡುಗಡೆ:

ಇದೇ ಸಂದರ್ಭದಲ್ಲಿ ಫೆಬ್ರವರಿ 6, 7ರಂದು ಜರಗಲಿರುವ
ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಡಾ. ಯೋಗಿಂದ್ರ ಭಟ್ ಬಿಡುಗಡೆಗೊಳಿಸಿದರು.

ಕುಮಾರಿ ಪುಷ್ಪ ಪ್ರಸನ್ನ ಪ್ರಾರ್ಥಿಸಿದರು.ರಾಜೇಶ್ ರೈ ಹೆನ್ನಡ್ಕ ಸ್ವಾಗತಿಸಿದರು. ದಿನೇಶ್ ಮತ್ತು ಸಂದೇಶ್ ಆಗ್ಫಲ ನಿರೂಪಿಸಿದರು. ಪ್ರವೀಣ್ ಎಂ. ಬಾರ್ಯ ವಂದಿಸಿದರು.

error: Content is protected !!
Scroll to Top