ಅಜ್ಮೀರ್ ದರ್ಗಾ ಕುರಿತು ಹೊಸ ವಿವಾದ ಸೃಷ್ಟಿ: ಶಿವಾಲಯವನ್ನು ದರ್ಗಾವಾಗಿ ಪರಿವರ್ತಿಸಲಾಗಿದೆ ಎಂದು ಕೋರ್ಟ್‌ಗೆ ಅರ್ಜಿ

ರಾಜಸ್ಥಾನ: ಅಜ್ಮೀರ್ ದರ್ಗಾ ಪ್ರದೇಶವು ಮೂಲತಃ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿತ್ತು ಎಂಬ ಹೇಳಿಕೆಯೊಂದಿಗೆ ಅಜ್ಮೀರ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿಯೊಂದು ‌ಸಲ್ಲಿಕೆಯಾಗಿದ್ದು, ಇದು ಸದ್ಯ ಹೊಸ ವಿವಾದವೊಂದನ್ನು ಸೃಷ್ಠಿ ಮಾಡಿದೆ.

ಬಲಪಂಥೀಯ ಸಂಘಟನೆ ಮಹಾರಾಣಾ ಪ್ರತಾಪ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್ ಈ ಅರ್ಜಿ ಸಲ್ಲಿಕೆ ಮಾಡಿರುವುದಾಗಿದೆ.

ಅಜ್ಮೀರ್ ಶಿವ ದೇವಾಲಯವನ್ನು ನಂತರದ ಕಾಲದಲ್ಲಿ ದರ್ಗಾ‌ವಾಗಿ ಪರಿವರ್ತನೆ ಮಾಡಲಾಗಿದೆ. ಬಹುಕಾಲದಿಂದಲೂ ನಾನು ಈ ವಿಚಾರವನ್ನು ಮುಂದಿಟ್ಟುಕೊಂಡು ಬಂದಿದ್ದು, ಆ ಪ್ರದೇಶದಲ್ಲಿ ಪುರಾತತ್ವ ಸಮೀಕ್ಷೆ ನಡೆಸುವಂತೆಯೂ ಅವರು ಮನವಿ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ರಾಷ್ಟ್ರಪತಿಗಳಿಗೆ ‌ಸಲ್ಲಿಕೆ ಮಾಡಲಾಗಿದ್ದ ಅರ್ಜಿಯನ್ನು ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗೆ ರವಾನೆ ಮಾಡಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.





















































 
 

ಅರ್ಜಿದಾರರ ಪರ ವಕೀಲ ಎ.ಪಿ. ಸಿಂಗ್ ಮಾತನಾಡಿ, ದರ್ಗಾ ಸ್ಥಳವು ಪ್ರಾಚೀನ ಕಾಲದಿಂದಲೂ ಶಿವನಿಗೆ ಸಮರ್ಪಿತ ದೇವಾಲಯವಾಗಿತ್ತು ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಅಧಿಕೃತ ಸಮೀಕ್ಷೆ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ರೀತಿಯ ಬೇಡಿಕೆಗಳು ಇದಕ್ಕೂ ಮುನ್ನವೂ ಕೇಳಿಬಂದಿದ್ದು 2024ರಲ್ಲಿ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಕೂಡ ಇದೇ ವಿಷಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬೆಳವಣಿಗೆ ಅಶ್ಮೀರ್ ದರ್ಗಾ ಕುರಿತು ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದೆ.

error: Content is protected !!
Scroll to Top