ಘಟಕೇಸರ್, ಹೈದರಾಬಾದ್: ಇಲ್ಲಿನ TARA UAV Pvt Ltd (TARA Done Academy) ಇದರ ವಿಶಾಲ 10 ಎಕರೆಯ ಸುಸಜ್ಜಿತ ಆವರಣದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ಆಯೋಜಿಸಲ್ಪಟ್ಟ 12 ದಿನಗಳ ಉಚಿತ Drone Piloting ಮತ್ತು GIS ತರಬೇತಿ ಸಮಾಪನಗೊಂಡಿತು.
ದೆಹಲಿಯ DMI Housing and Finance Pvt Ltd ಇವರು ಪ್ರವರ್ತಿಸಿದ ತರಬೇತಿಯನ್ನು ಹೈದರಾಬಾದ್’ನ TARA UAV Pvt Ltd (TARA Done Academy) ಇದರ Accountable Manager Dr. ಜಿ. ಟಿ. ವಿಜಯ್ ಕುಮಾರ್ ಇವರು ಪರಿಣಾಮಕಾರಿಯಾಗಿ ನಿರ್ದೇಶಿಸಿದ್ದರು. ಅವರ ಜೊತೆಗೆ ಪ್ರವೀಣ್ ಗೊಲ್ಲಪಲ್ಲಿ, ರಾಕೇಶ್ ಮತ್ತು ಮಹೇಶ್ ಸಹ ತರಬೇತುದಾರರಾಗಿ ಸಹಕರಿಸಿದ್ದರು.
ಪುತ್ತೂರಿನ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಇವರ ಮೂಲಕ ಅನುಷ್ಠಾನಿಸಲ್ಪಟ್ಟ ತರಬೇತಿಯ ಭಾಗವಾದ 6 ದಿನಗಳ ಉಪನ್ಯಾಸ ಕಾರ್ಯಕ್ರಮವು ಅಲುಂಬುಡದ ಎವಿಜಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್’ನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆದಿತ್ತು. ಪುತ್ತೂರಿನ ಅರಸ್ ಟ್ರಸ್ಟ್ ಅವರು ಸಹಕರಿಸಿದ್ದರು.

ಸಮಾರೋಪ ಸಮಾರಂಭ
ನಿನ್ನೆ ನಡೆದ ಸಮಾರೋಪ ಸಮಾರಂಭದಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಡಾಕ್ಟರ್ ವಿಜಯ್ ಕುಮಾರ್ ಅವರು ಮಾತನಾಡಿ ‘ಇಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ದೇಶಕ್ಕಾಗಿ ದುಡಿಯುತ್ತಾ ಅರ್ಹ ಬಡವರಿಗೆ ಸೇವೆ ನೀಡಿದರೆ ಅದುವೇ ನನಗೆ ನೀವು ಕೊಡುವ ಅತಿ ದೊಡ್ಡ ಕೊಡುಗೆ’ ಎಂದರು.
ತರಬೇತುದಾರ ಪ್ರವೀಣ್ ಗೊಲ್ಲಪಲ್ಲಿ ಶುಭ ಹಾರೈಸಿದರು. ಹೈದರಾಬಾದ್ ನ Delhi Public Schoolನಲ್ಲಿ ಶಿಕ್ಷಕಿಯಾಗಿರುವ ಶ್ರೀಮತಿ ನೀಲವೇಣಿ ವಿಜಯ್ ಕುಮಾರ್ ಅವರು ಪ್ರಾರ್ಥನೆ, ಸಂಯೋಜಕಿ ಡಾಕ್ಟರ್ ಹರಿಣಾಕ್ಷಿ ಎಂ. ಡಿ. ಅವರು ಧನ್ಯವಾದ ಸಮರ್ಪಣೆ ಮತ್ತು ಸಂಯೋಜಕ ಸೀತಾರಾಮ ಕೇವಳ ಸ್ವಾಗತ ಮತ್ತು ನಿರೂಪಣೆಗಳನ್ನು ನಿರ್ವಹಿಸಿದರು.
12 ಮಹಿಳೆಯರು ಈಗ ಡ್ರೋನ್ ಹಾರಾಟ ಪರವಾನಗಿದಾರರು
ಲಹರಿ ಕೆ.ಆರ್. W/o ಸುಜನ್ ಕೇವಳ, ಯಶಸ್ವಿನಿ ಎ.ಜಿ. D/o ಗಂಗಾಧರ ಎ.ವಿ., ಮಧುರಾ ಎ.ಆರ್. D/o ಆನಂದ ಇ., ಸುರಕ್ಷಾ ಕೆ. ಪಿ. D/o ಪೂವಪ್ಪ ಗೌಡ ಕೆ., ಅಪೂರ್ವ ಕೆ, D/o ಕೆ. ಸದಾಶಿವ ಹೊಳ್ಳ, ಅನನ್ಯಾ ಎನ್.ಬಿ. D/o ಎನ್.ಬಿ. ಬಾಲಕೃಷ್ಣ,
ಚೈತನ್ಯಾ D/o ವೀರಪ್ಪ ಪೂಜಾರಿ,
ಚೈತನ್ಯಾ ಕೆ. D/o ರಾಮಣ್ಣ ಗೌಡ,
ಹರಿಣಾಕ್ಷಿ D/o ಯಶೋಧರ ಮೂಲ್ಯ, ಪೂಜಾ ಎನ್. D/o ಉಮಾನಂದ ಎನ್., ಶಿಲ್ಪಾ ರೈ ಎಂ. D/o ರಾಮಕೃಷ್ಣ ರೈ ಎಂ. ಮತ್ತು ಶ್ರೇಯಾ ಎಸ್.ಆರ್. D/o ರಘುಪತಿ ಎಸ್. ಈ 12 ಮಹಿಳೆಯರು ಇದೀಗ ಡ್ರೋನ್ ಹಾರಾಟ DGCA ಪ್ರಮಾಣೀಕೃತ ಪರವಾನಗಿದಾರರು. ಇವರೆಲ್ಲರಿಗೂ ಮೊದಲ ಹಂತದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ರೂವಾರಿ ಡಾಕ್ಟರ್ ಜಿ.ಟಿ. ವಿಜಯ್ ಕುಮಾರ್
TARA UAVಯಲ್ಲಿ Accountable Manager ಆಗಿ ಸಂಸ್ಥೆಯನ್ನು ಅದ್ಭುತವಾಗಿ ಬೆಳೆಸಿರುವ ಬಳ್ಳಾರಿಯ ನಿವಾಸಿ, ಕನ್ನಡಿಗ, ಡಾಕ್ಟರ್ ಜಿ.ಟಿ. ವಿಜಯ್ ಕುಮಾರ್ ಈ ಯೋಜನೆಯ ಶಿಲ್ಪಿ. ಯಾವತ್ತೂ ಪರೋಪಕಾರಕ್ಕಾಗಿ ತುಡಿಯುವ ವಿಜಯ್ ಕುಮಾರ್ ದೆಹಲಿಯ DMI Housing and Finance Pvt Ltd ಸಂಸ್ಥೆಯನ್ನು ಸಂಪರ್ಕಿಸಿ ಅವರ CSR Fundನ ಮೂಲಕ ಆರ್ಥಿಕ ನೆರವನ್ನು ಪಡೆಯುವಲ್ಲಿ ಅಗ್ರಪಾತ್ರ ವಹಿಸಿದ್ದರು. ಈ ಮೂಲಕವಾಗಿ 12 ಮಹಿಳೆಯರು ಭಾರತಕ್ಕೆ ಸಂಪನ್ಮೂಲವಾಗಿ ಒದಗುವಲ್ಲಿ ಸಹಾಯಕರಾಗಿದ್ದಾರೆ.
ಕೇವಳ ಅವರ ಸಂಯೋಜನೆ
ನಿವೃತ್ತ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ಅವರ ಪತ್ನಿ ಉಡುಪಿಯ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಹರಿಣಾಕ್ಷಿ ಎಂ.ಡಿ. ಅವರು ಸುಮಾರು 13 ಲಕ್ಷ ರೂಪಾಯಿಗಳ ಈ ತರಬೇತಿಯನ್ನು ಅವರ ಅರಸ್ ಟ್ರಸ್ಟ್ ಪುತ್ತೂರು ಇದರ ಮೂಲಕ ಸಂಯೋಜಿಸಿದ್ದರು. ಪುತ್ತೂರಿನ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಮತ್ತು ಎವಿಜಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಮತ್ತು ಅರಸ್ ಟ್ರಸ್ಟ್ ಗಳು ಮುಂಚೂಣಿಯಲ್ಲಿದ್ದು ಸಹಕರಿಸಿದ್ದರು.
























