ಅಕ್ರಮ ಮರಳುಗಾರಿಕೆ ಮೇಲೆ ದಾಳಿ : ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

ಬೆಳ್ತಂಗಡಿ : ಸರ್ಕಾರಕ್ಕೆ ರಾಜಧನ ಕಟ್ಟದೆ ನದಿಯ ಕಿನಾರೆಯಿಂದ ಹಿಟಾಚಿ ಬಳಸಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜ.8 ರಂದು ಬೆಳಗ್ಗೆ 7 ಗಂಟೆಗೆ ಸಿಬ್ಬಂದಿ ಜೊತೆ ಬೆಳ್ತಂಗಡಿ ಸಬ್‌ಇನ್ಸ್‌ಪೆಕ್ಟರ್ ಆನಂದ್ ಎಂ ರೌಂಡ್‌ ಕರ್ತವ್ಯದಲ್ಲಿರುವಾಗ ಮಾಹಿತಿದಾರರಿಂದ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಡಿರುದ್ಯಾವರ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ದಾಳಿ ಮಾಡಿದಾಗ ನೇತ್ರಾವತಿ ನದಿ ಕಿನಾರೆಯಿಂದ ಮರಳು ಕಳ್ಳತನ ಮಾಡಿ ಹಿಚಾಚಿ ಮೂಲಕ ಟಿಪ್ಪರ್ ಲಾರಿಗೆ ತುಂಬಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ದಾಳಿ ವೇಳೆ ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಲಾರಿ ಬಿಟ್ಟು ಓಡಿ ಹೋಗಿದ್ದು, ಹಿಟಾಚಿ ಅಪರೇಟರ್‌ನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಚಾರ್ಮಾಡಿಯ ಮಹಮ್ಮದ್ ಶಮೀರುದ್ದಿನ್ ಎಂಬುದಾಗಿ ಹಾಗೂ ಓಡಿ ಹೋದ ಟಿಪ್ಪರ್ ಚಾಲಕನ ಹೆಸರು ಚಾರ್ಮಾಡಿಯ ಎಚ್.ಹನೀಫ್ ಎಂಬುದಾಗಿ ತಿಳಿಸಿದ್ದಾನೆ. ಬೆಳ್ತಂಗಡಿ ಪೊಲೀಸರಿಗೆ ತಿಳಿಯದಂತೆ ಹಲವು ಸಮಯಗಳಿಂದ ರಾಜರೋಷವಾಗಿ ಆರೋಪಿ ಇದೆ ಸ್ಥಳದಿಂದ ಮರಳು ಕಳ್ಳತನ ಮಾಡುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ.

ಅಕ್ರಮವಾಗಿ ಮರಳು ತುಂಬಿದ್ದ 3,50,000 ಮೌಲ್ಯದ ಟಿಪ್ಪರ್ KA-41-C-0057 ಮತ್ತು 2,50,000 ಮೌಲ್ಯದ DOOSAN HITACHI- 150 ವಶಪಡಿಸಿಕೊಂಡು ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದ ಚಾರ್ಮಾಡಿ ನಿವಾಸಿಗಳಾದ ಮಹಮ್ಮದ್ ಶಮೀರುದ್ದಿನ್ ಮತ್ತು ಎಚ್.ಹನೀಫ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





















































 
 
error: Content is protected !!
Scroll to Top