ಇಸ್ರೇಲ್‌ ಪ್ರಧಾನಿಯನ್ನು ಅಪಹರಿಸಲು ಅಮೆರಿಕಕ್ಕೆ ಪಾಕಿಸ್ತಾನ ಒತ್ತಾಯ

ಬೆಂಜಮಿನ್‌ ನೆತನ್ಯಾಹು ಅವರನ್ನು ಕಿಡ್ನಾಪ್‌ ಮಾಡಿ ಎಂದು ಆಗ್ರಹ

ಇಸ್ಲಾಮಾಬಾದ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಅಪಹರಿಸಬೇಕು ಎಂಬ ವಿಚಿತ್ರ ಬೇಡಿಕೆಯೊಂದನ್ನು ಅಮೆರಿಕ ಮತ್ತು ಟರ್ಕಿಯ ಮುಂದೆ ಪಾಕಿಸ್ಥಾನ ಇಟ್ಟಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅಮೆರಿಕ ಹಾಗೂ ಟರ್ಕಿಗೆ ಈ ಒತ್ತಾಯ ಮಾಡಿದ್ದಾರೆ.

ಪಾಕಿಸ್ತಾನದ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಖವಾಜಾ ಆಸಿಫ್, ವೆನೆಜುವೆಲಾ ಅಧ್ಯಕ್ಷರನ್ನು ಅಮೆರಿಕ ಅಪಹರಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನೂ ಅಪಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.





















































 
 

ಬೆಂಜಮಿನ್ ನೆತನ್ಯಾಹು ಮಾನವೀಯತೆಯ ಅಪರಾಧಿಯಾಗಿದ್ದು, ಗಾಜಾಪಟ್ಟಿಯಲ್ಲಿ ಆತ ಮಾಡಿರುವ ನರಮೇಧಕ್ಕೆ ಕ್ಷಮೆಯೇ ಇಲ್ಲ. ಅಮೆರಿಕಕ್ಕೆ ಮಾನವೀಯತೆ ಮೇಲೆ ಗೌರವವಿದ್ದರೆ ಈ ಕೂಡಲೇ ಇಸ್ರೇಲ್ ಪ್ರಧಾನಿಯನ್ನು ಅಪಹರಿಸಬೇಕು. ನಾನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಇದನ್ನು ನಿರೀಕ್ಷಿಸುತ್ತೇನೆ ಎಂದು ಖವಾಜಾ ಆಸಿಫ್ ಹೇಳಿದ್ದಾರೆ.

ಟರ್ಕಿ ಕೂಡ ಬೆಂಜಮಿನ್ ನೆತನ್ಯಾಹು ಅವರನ್ನು ಅಪಹರಿಸಬಹುದು. ಪ್ರತಿಯೊಬ್ಬ ಪಾಕಿಸ್ತಾನಿ ಅದಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದಾನೆ. ಇಸ್ರೇಲ್ ಪ್ರಧಾನಿ ಪ್ಯಾಲೆಸ್ತೀನಿಯರ ಮೇಲೆ ನಡೆಸಿದ ದೌರ್ಜನ್ಯಕ್ಕೆ, ಮಾನವ ನಾಗರಿಕ ಇತಿಹಾಸದಲ್ಲಿ ಬೇರೆ ಉದಾಹರಣೆ ಸಿಗುವುದಿಲ್ಲ ಎಂದು ಖವಾಜಾ ಆಸಿಫ್ ವಾಗ್ದಾಳಿ ನಡೆಸಿದ್ದಾರೆ.

error: Content is protected !!
Scroll to Top