ಪ್ರಸಾರವೇ ಇಲ್ಲದ ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆಗೆ ಕೋಟಿ ಕೋಟಿ ಜಾಹೀರಾತು : ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ರಾಜ್ಯದ ಖಜಾನೆ ನಿಮ್ಮ ಪಕ್ಷದ ಸ್ವಂತ ಖಜಾನೆಯೇ ಎಂದು ಪ್ರಶ್ನಿಸಿದ ಆರ್‌.ಅಶೋಕ್‌

ಬೆಂಗಳೂರು: ಪ್ರಸಾರವೇ ಇಲ್ಲದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಕರ್ನಾಟಕ ಸರ್ಕಾರ ಕೋಟಿ ಕೋಟಿ ಜಾಹೀರಾತು ಕೊಟ್ಟಿರುವ ವಿಚಾರ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದೆ. ಕಾಂಗ್ರೆಸ್‌ ಮೇಲೆ ಮುಗಿಬಿದ್ದಿರುವ ಬಿಜೆಪಿ ರಾಜ್ಯದ ಖಜಾನೆ ನಿಮ್ಮ ಪಕ್ಷದ ಸ್ವಂತ ಖಜಾನೆಯೇ ಎಂದು ಪ್ರಶ್ನಿಸಿದೆ.

ಕರ್ನಾಟಕದ ಖಜಾನೆಯನ್ನು ಕಾಂಗ್ರೆಸ್ ಖಜಾನೆ ಮಾಡುವುದಕ್ಕೆ ಸರ್ಕಾರ ಹೊರಟಿದೆ ಎಂದು ವಿಪಕ್ಷ ‌ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.





















































 
 

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸರ್ಕಾರದಿಂದ ಹೆಚ್ಚು ಜಾಹೀರಾತು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಖಜಾನೆ ಮಾಡೋಕೆ ಹೊರಟಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೇಲ್‌ನಲ್ಲಿ ಇದ್ದಾರೆ. ಡಿಕೆ ಬ್ರದರ್ಸ್ ತನಿಖೆ ಎದುರಿಸುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯೇ ಬೋಗಸ್. ಕರ್ನಾಟಕದಲ್ಲಿ ಒಬ್ಬರ ಮನೆಗೂ ಈ ಪತ್ರಿಕೆ ಬರುವುದಿಲ್ಲ‌. ಇಂತಹ ಪತ್ರಿಕೆಗೆ ನಮ್ಮ ಮಹಾನುಭಾವ ಸಿಎಂ, ದಾಖಲೆಗಳ ವೀರ ಕೋಟಿ ಕೋಟಿ ಹಣ ಜಾಹೀರಾತು ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬರೀ ಎರಡೂವರೆ ವರ್ಷಗಳಲ್ಲಿ 4 ಕೋಟಿ ರೂ. ಜಾಹೀರಾತು ಕೊಟ್ಟಿದ್ದಾರೆ. ಇಡೀ ಪ್ರಪಂಚದಿಂದ ಅವರಿಗೆ ಬಂದಿರೋ‌ ಜಾಹಿರಾತು ಶೇ.31. ಕರ್ನಾಟಕದಿಂದ ಶೇ.69 ಜಾಹೀರಾತು ಹೋಗಿದೆ. ಎಲ್ಲೂ ಪತ್ರಿಕೆ ಇಲ್ಲ‌. ಇಡೀ ಪ್ರಪಂಚದಲ್ಲಿ ನಂಬರ್ ಒನ್ ಪತ್ರಿಕೆ ಅದು. ಇದು ಹಗಲು ದರೋಡೆ. ಆ ಪತ್ರಿಕೆ ಬೇಲ್ ಮೇಲೆ ಇದೆ. ಟ್ರಸ್ಟಿಗಳು ಬೇಲ್‌ನಲ್ಲಿ ಇದ್ದಾರೆ‌. ಕಾಂಗ್ರೆಸ್ ಸರ್ಕಾರಕ್ಕೆ ಜನ ಛೀಮಾರಿ ಹಾಕಿದ್ದಾರೆ. ಆಲಿಬಾಬಾ 40 ಕಳ್ಳರು ನೋಡಿದ್ದೇವೆ.‌ ಗೃಹಲಕ್ಷ್ಮಿಯಲ್ಲಿ ಹಣ ಕೊಡದೆ ಲೂಟಿ ಮಾಡಿದ್ದಾರೆ. ಈ ಪತ್ರಿಕೆಗೆ ಇಷ್ಟು ಹಣ ಕೊಟ್ಟಿರುವುದು ಅಕ್ಷ್ಯಮ್ಯ. ಜನರ ತೆರಿಗೆ ಲೂಟಿ ‌ಮಾಡುತ್ತಾ ಇದ್ದಾರೆ. ಸಿದ್ದರಾಮಯ್ಯ ಅವರು ಇದಕ್ಕೆ ಲೆಕ್ಕ‌ ಕೊಡಬೇಕು ಅಂತ ಆಗ್ರಹಿಸಿದ್ದಾರೆ.

error: Content is protected !!
Scroll to Top