ಸತತ ಪ್ರಯತ್ನದ ಫಲವೇ ಯಶಸ್ಸು: ಸೀತಾರಾಮ ಕೇವಳ

ಅಂಕ ಗಳಿಕೆಯೇ ‌ಶಿಕ್ಷಣವಲ್ಲ: ರಾಜೇಂದ್ರ ಭಟ್ ಕೆ.

ಶಿಕ್ಷಣದ ಜೊತೆಗೆ ಕ್ರೀಡೆಗೂ ಒತ್ತು ನೀಡಿ: ಶಿವರಾಮ ಏನೆಕಲ್

ಕಾಣಿಯೂರು: ಸಾಧನೆ ಮಾಡಬೇಕು ಎನ್ನುವವರಿಗೆ ಅಸಾಧ್ಯವಾದದ್ದು ಏನೂ ಇಲ್ಲ. ವಿದ್ಯಾರ್ಥಿಯಾಗಿದ್ದಾಗಲೇ ಪರಿಶ್ರಮ, ಅಭ್ಯಾಸ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಕುದ್ಮಾರು ಶಾಲೆಯಲ್ಲಿ ಮಕ್ಕಳ ಸಾಧನೆಗೆ ಪೂರಕ ವಾತಾವರಣ ಇರುವುದು ಸಂತಸದ ವಿಷಯ ರಾಷ್ಟ್ರೀಯ ಮಟ್ಟದ ವಿಕಸನ ತರಬೇತುದಾರ, ನಿವೃತ್ತ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು.





















































 
 

ಅವರು ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು SDMC ವತಿಯಿಂದ ಸ. ಉ. ಹಿ. ಪ್ರಾ. ಶಾಲೆ ಕುದ್ಮಾರಿನಲ್ಲಿ ನಡೆದ ಶೈಕ್ಷಣಿಕ – ಸಂಕಲನ ಸರಣಿ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಕುದ್ಮಾರು ಶಾಲೆಯ ನಿವೃತ್ತ ಮುಖ್ಯಗುರು ಕೆ. ಸುಶೀಲಾ ಮೋಹನ್ ಉದ್ಘಾಟಿಸಿದರು. ಶಾಲಾ ಮುಖ್ಯಗುರು ಮಿನಿ ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ವಿಕಸನ ತರಬೇತುದಾರ ರಾಜೇಂದ್ರ ಭಟ್ ಕೆ. ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅಂಕ ಗಳಿಕೆಯೇ ಶಿಕ್ಷಣವಲ್ಲ. ಬದಲಾಗಿ ಭವಿಷ್ಯ ಕಟ್ಟಿ ಕೊಡುವ ಶಿಕ್ಷಣ, ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಣದ ಅವಶ್ಯಕತೆ ಇದೆ. ಈ ಹಿನ್ನೆಲೆ ಅವರಿಗೆ ಸ್ಫೂರ್ತಿ ಕತೆಗಳ ಮೂಲಕ ಶಿಕ್ಷಣ ಒದಗಿಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.

ಶಾಲೆಗಳಲ್ಲಿ ಮಕ್ಕಳಿಗೆ ಬಹುಮಾನ ರೂಪದಲ್ಲಿ ಪುಸ್ತಕಗಳನ್ನು ನೀಡಬೇಕು. ಆ ಮೂಲಕ ಅವರಲ್ಲಿ ಓದಿನ ಅಭಿರುಚಿ ಹೆಚ್ಚಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಸ್ಥಾನಕ್ಕೇರಿದ ಆದರ್ಶ ವ್ಯಕ್ತಿಗಳ‌ ಸಾಧನೆ, ಸರಳತೆಗಳ ಬಗ್ಗೆಯೂ ಅವರು ಮಾತನಾಡಿದರು.

ಮುಖ್ಯ ಅತಿಥಿ ನಿವೃತ್ತ ದೈ. ಶಿ. ಶಿ. ಶಿವರಾಮ ಏನೇಕಲ್ಲು ಮಾತನಾಡಿ, ಕುದ್ಮಾರು ಶಾಲೆಗೆ ಒಂದು ವಿಶಿಷ್ಟ ಪರಂಪರೆ ಇದೆ. ಮುಂದಿನ ದಿನಗಳಲ್ಲಿ ಶಾಲೆ ಮತ್ತಷ್ಟು ಅಭಿವೃದ್ಧಿ ಕಾಣಲಿ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಸಕ್ತ ಮಕ್ಕಳಿಗೆ ತನ್ನಿಂದ ಸಲಹೆ, ಸಹಕಾರ ನೀಡುವುದಾಗಿ ತಿಳಿಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಚಂದ್ರ ಬರೆಪ್ಪಾಡಿ ಪ್ರಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕಿ ವೀಣಾ ಕೆ. ಅತಿಥಿಗಳನ್ನು ಪರಿಚಯಿಸಿದರು. ಪ್ರೌಢಶಾಲಾ ಶಿಕ್ಷಕಿ ಶ್ರೀಲತಾ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಾಗೇಶ್ ಕೆಡೆಂಜಿ ವಂದಿಸಿದರು.

error: Content is protected !!
Scroll to Top