ಜ.3 : ಕುದ್ಮಾರು ಶಾಲೆ ಪೋಷಕರ-ಶಿಕ್ಷಕರ ಮಹಾಸಭೆ

ಶೈಕ್ಷಣಿಕ ಸಂಕಲನ ಸರಣಿ ಕಾರ್ಯಕ್ರಮ, ಉಪನ್ಯಾಸ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸ.ಉ.ಹಿ.ಪ್ರಾ ಶಾಲೆ ಕುದ್ಮಾರು ಕಡಬ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಕುದ್ಮಾರು ಸಹಯೋಗದಲ್ಲಿ ʼಪೋಷಕರ – ಶಿಕ್ಷಕರ ಮಹಾಸಭೆ ಮತ್ತು ಶೈಕ್ಷಣಿಕ ಸಂಕಲನ-ಇದು ನಮ್ಮ ಶಾಲಾ ಪ್ರಗತಿಯ ಹೆಜ್ಜೆʼ ಸರಣಿ 1 ಕಾರ್ಯಕ್ರಮ ಜ.3ರಂದು ಬೆಳಗ್ಗೆ 10ರಿಂದ ನಡೆಯಲಿದೆ.

ವಿದ್ಯಾಂಗ ಉಪನಿರ್ದೇಶಕರು ಮಂಗಳೂರು ಶಶಿಧರ ಜಿ.ಎಸ್‌. ಕಾರ್ಯಕ್ರಮ ಉದ್ಘಾಟಿಸುತ್ತಾರೆ. ನಿವೃತ್ತ ಮುಖ್ಯ ಶಿಕ್ಷಕಿ ಕೆ.ಸುಶೀಲಾ ಮೋಹನ್‌ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.





















































 
 

ಸಂಪನ್ಮೂಲ ವ್ಯಕ್ತಿಗಳಾಗಿ ಮುಖ್ಯಶಿಕ್ಷಕ ಹಾಗೂ ರಾಷ್ಟ್ರಮಟ್ಟದ ವಿಕಸನ ತರಬೇತಿದಾರ ರಾಜೇಂದ್ರ ಭಟ್‌ ಕೆ. ʼಶಿಕ್ಷಣದ ಮೂಲಕ ಸಬಲೀಕರಣʼ ಮತ್ತು ನಿವೃತ್ತ ಪ್ರಾಂಶುಪಾಲ ಹಾಗೂ ರಾಷ್ಟ್ರಮಟ್ಟದ ತರಬೇತಿದಾರ ಸೀತಾರಾಮ ಕೇವಲ ʼವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನʼ ಎಂಬ ವಿಚಾರದ ಬಗ್ಗೆ ಮಾತನಾಡಲಿದ್ದಾರೆ.

error: Content is protected !!
Scroll to Top