ಜಿಡಿಪಿಯಲ್ಲಿ ಜಪಾನನನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ನೆಗೆದ ಭಾರತ

ಈಗ ಭಾರತ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶ

ನವದೆಹಲಿ: ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಭಾರತ ಹೊರಹೊಮ್ಮಿದೆ. ಆರ್ಥಿಕ ಸುಧಾರಣೆಗಳಿಂದ ಜಪಾನನ್ನು ಹಿಂದಿಕ್ಕಿ ಭಾರತ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಗಾತ್ರವು 4.18 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. 4.18 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಭಾರತವು ಜಪಾನನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಮುಂದಿನ 3 ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಲಿದೆ. 2030ರ ವೇಳೆಗೆ 7.3 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದ ದೇಶವಾಗಲಿದೆ ಎಂದಿದೆ.





















































 
 

ದೇಶೀಯ ಬೇಡಿಕೆ, ವಿದೇಶಿ ಹೂಡಿಕೆ, ಹಣದುಬ್ಬರ ಇಳಿಕೆ, ನಿರುದ್ಯೋಗ ಇಳಿಕೆ, ರಫ್ತು ಹೆಚ್ಚಳ ಕಾರಣದಿಂದ ದೇಶದ ಜಿಡಿಪಿ ದರ ಏರಿಕೆಯಾಗಿದೆ. ವಾಣಿಜ್ಯ ವಲಯಕ್ಕೆ ಆರೋಗ್ಯಕರ ಸಾಲದ ಹರಿವಿನೊಂದಿಗೆ ಹಣಕಾಸಿನ ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಸರ್ಕಾರ ತಿಳಿಸಿದೆ.

error: Content is protected !!
Scroll to Top