ಮೊಬೈಲ್ ಬಿಟ್ಟು ಓದುವಂತೆ ಹೇಳಿದ ತಾಯಿ: ಮಗಳು ಆತ್ಮಹತ್ಯೆ

ಉಡುಪಿ: ಮೊಬೈಲ್ ಬಿಟ್ಟು ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸುವಂತೆ ತಾಯಿ ಹೇಳಿದ ಬುದ್ಧಿ ಮಾತಿಗೆ ಬೇಸತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ.

ಉಡುಪಿ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಹಿರೇಬೆಟ್ಟು ನಿವಾಸಿ ಸಮನ್ವಿ (17) ನೇಣಿಗೆ ‌ಶರಣಾಗಿರುವುದಾಗಿದೆ.

ಸಮನ್ವಿ ಓದದೆ ಫೋನಿನಲ್ಲೇ ಮಾತನಾಡುತ್ತಿದ್ದು, ಆಕೆಗೆ ಮುಂಬರುವ ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸುವಂತೆ ತಾಯಿ ಬುದ್ಧಿವಾದ ಹೇಳಿದ್ದರು. ಆ ಬಳಿಕ ಆಕೆ ರೂಮಿಗೆ ತೆರಳಿ ಒಳಗಿನಿಂದ ಲಾಕ್ ಮಾಡಿದ್ದು, ಆಕೆ ರೂಮಿನ‌ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ. ಒಳಗೆ ಓದುಕೊಳ್ಳುತ್ತಿದ್ದಾಳೆ ಎಂದು ತಿಳಿದ ತಾಯಿ, ತುಂಬಾ ಸಮಯದ ಬಳಿಕವೂ ಆಕೆ ಹೊರ ಬರದೇ ಇದ್ದಾಗ ಬಾಗಿಲು ದೂಡಿ ಒಳಕ್ಕೆ ಹೋಗಿದ್ದಾರೆ. ಈ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ‌ಕಂಡುಬಂದಿದೆ.





















































 
 

ಕೂಡಲೇ ಆಕೆಯನ್ನು ಮಣಿಪಾಲದ ಆಸ್ಪತ್ರೆಗೆ ಕರೆತರಲಾದರೂ, ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಮಣಿಪಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ.

error: Content is protected !!
Scroll to Top