ಪುತ್ತೂರು: ಸರ ಕಳ್ಳಿಯರ ಬಂಧನ

ಪುತ್ತೂರು: ದೇಗುಲದಲ್ಲಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳ್ಳತನ ಮಾಡಿದ ಮೂವರು ಕಳ್ಳಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ಮಾರಿ, ಕಾಳಿಯಮ್ಮ ಯಾನೆ ಭಗವತಿ, ಶೀತಲ್ ಯಾನೆ ಪ್ರಿಯಾ ಎಂದು ಗುರುತಿಸಲಾಗಿದೆ.

ಕೆಮ್ಮಿಂಜೆಯ ಯಮುನಾ ಎಂಬವರ ‌ಸರವನ್ನು ಕೆಮ್ಮಿಂಜೆ ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿತ್ತು. ಸುಮಾರು 14 ಗ್ರಾಂ ತೂಕದ ಸರವನ್ನು ಅವರು ಊಟ ಮಾಡಿ ಕೈ ತೊಳೆಯುವ ಸಮಯದಲ್ಲಿ ಕದಿಯಲಾಗಿತ್ತು. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. 60 ಸಾವಿರ ಮೌಲ್ಯದ ಸರ ಇದಾಗಿದ್ದು, ಕಳ್ಳತನ ಮಾಡಿದ ಖದೀಮರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿದೆ.





















































 
 

error: Content is protected !!
Scroll to Top