ಪುತ್ತೂರು: ಇಲ್ಲಿನ ಪಡ್ಡಾಯೂರಿನಲ್ಲಿರುವ ‘ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ಉಪ್ಪಿನಂಗಡಿ’ ಇಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಾಂಸ್ಕೃತಿಕ ಉಪ ಸಮಿತಿಯ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಭಾರತೀಯ ಸಂವಿಧಾನ ಪೀಠಿಕೆ ಗಾಯನ ಅಭಿಯಾನದ ಅಂಗವಾಗಿ ಸೋನಿಕಾ ಜನಾರ್ದನ್ ಸಂವಿಧಾನ ಪೀಠಿಕೆಯ ಗಾಯನ ಅಭಿಯಾನದ ಅಂಗವಾಗಿ ಗಾಯನ ಕಾರ್ಯಕ್ರಮ ನಡೆಯಿತು.

ಶಾಲಾ ಪ್ರಾಂಶುಪಾಲರಾದ ಸತೀಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ವಾಣಿಶ್ರೀ, ನಿಲಯ ಪಾಲಕ ವಸಂತ ಎಂ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಜಯಂತಿ, ಸದಸ್ಯರಾದ ಜಯಶ್ರೀ, ಶಿಕ್ಷಕರಾದ ಜಯಪ್ರಕಾಶ್, ಕೃಷ್ಣ ಕುಮಾರ್, ಉಷಾ ಕುಮಾರಿ, ವನಿತಾ, ಬಾಲಕೃಷ್ಣ, ಸಂಜಯ್ಭಂ ಡಾರ್ಕರ್, ಸ್ಟಾಫ್ ನರ್ಸ್ ರೇಷ್ಮಾ, ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಬೆಟ್ಟಂಪಾಡಿ, ಪ್ರಮೀಳಾ ಜನಾರ್ದನ್ ಮೊದಲಾದವರು ಉಪಸ್ಥಿತರಿದ್ದರು.

ಆಕಾಂಕ್ಷಾ ಮತ್ತು ತಂಡದವರು ಪ್ರಾರ್ಥಿಸಿ 10ನೇ ತರಗತಿಯ ಪ್ರಣಾಮ್ ಸ್ವಾಗತಿಸಿದರು. 9ನೇ ತರಗತಿಯ ವರುಣ್ ವಂದಿಸಿದರು. ಪೂರ್ವಿ ನಿರೂಪಣೆಗೈದರು.
























