ಬೆಂಗಳೂರು: ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ) ಇದರ ಸಂಚಾಲಕ, ಸಂಘಟಕ, ಗಾಯಕ, ಯುವ ಸಾಹಿತಿ, ಕವಿ, ಜಾನಪದ ನೃತ್ಯಗಾರ ಕಲಾ ರತ್ನ ರವಿ ಪಾಂಬಾರು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ ಮುಡಿಗೇರಿದೆ.
ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮದೇ ಆದಾ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಮತ್ತಷ್ಟು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆಯಾಗಿದ್ದಾರೆ. ಇವರ ಕಲಾ ಸಂಸ್ಕೃತಿಯನ್ನು ಗುರುತಿಸಿ ಕನ್ನಡ ಫಿಲಂ ಚೇಂಬರ್ (ರಿ) ಇದರ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ 2025ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಫಿಲಂ ಚೇಂಬರ್‌ನ ಎಂ. ಎಸ್. ರವೀಂದ್ರ, ಸಾಹಿತಿ ನಟ ಜ್ಯೋತಿಷಿ ,ಚಲನಚಿತ್ರ ನಿರ್ದೇಶಕ ಭೀಮರಾವ್ ವಾಷ್ಟರ್, ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ) ಅಧ್ಯಕ್ಷ ಶ್ರೀಧರ್ ಎಕ್ಕಡ್ಕ, ವಿಠ್ಠಲ್ ನಾಯ್ಕ್ ಬಳ್ಳಿಕ್ಕನಾ ಚಲನಚಿತ್ರ ನಾಯಕ ನಟರು, ನಿರ್ದೇಶಕರು, ಸಾಮಾಜಿಕ ಗಣ್ಯರು ಧಾರ್ಮಿಕ ಕ್ಷೇತ್ರದ ಮುಖಂಡರು ಗಣ್ಯರು ಉಪಸ್ಥಿತರಿದ್ದರು.
























