ಭಜನೆಯಿಂದ ಸಂಸ್ಕಾರ ಬೆಳೆಯುತ್ತದೆ, ಮನೆ ಮನ ಬೆಳಗುತ್ತದೆ : ರಾಧಾಕೃಷ್ಣ ಅಡ್ಯಂತಾಯ

ವಿಟ್ಲ: ಭಜನಾ ಮಂದಿರ, ದೇವಸ್ಥಾನಗಳಲ್ಲಿ ಭಜನಾ ಕಾರ್ಯಕ್ರಮ ಮಾಡುವುದರ ಜೊತೆಗೆ ಪ್ರತಿ ಮನೆಯಲ್ಲೂ ನಿರಂತರ ಭಜನೆ ನಡೆಯಬೇಕು. ವ್ಯಕ್ತಿ ನಿರ್ಮಾಣ ಶಿಕ್ಷಣ ದೊರೆತಲ್ಲಿ ಮನುಷ್ಯನ ಮನಸ್ಸು ಚಂಚಲಗೊಳ್ಳುವುದಿಲ್ಲ. ಅದಕ್ಕಾಗಿ ಧಾರ್ಮಿಕ ಶಿಕ್ಷಣ ಅತ್ಯಗತ್ಯ. ಇಂತಹ ಕಾರ್ಯಕ್ರಮಗಳು ಬಹಳಷ್ಟು ಪ್ರೇರಣೆ ನೀಡುತ್ತಿದ್ದು ಭಜನಾ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಎಂದು ನಿವೃತ್ತ ಅಧ್ಯಾಪಕ ರಾಧಾಕೃಷ್ಣಾಯ ಅಡ್ಯಂತಾಯ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್( ರಿ) ವಿಟ್ಲ ತಾಲ್ಲೂಕು ಅಳಿಕೆ ವಲಯ ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ ತಾಲೂಕು, ಶ್ರೀ ಮಹಿಷಮರ್ಧಿನಿ ದೇವಸ್ಥಾನ ಪುಣಚ,ಇವರ ಸಹಯೋಗದೊಂದಿಗೆ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಪುಣಚ ದಲ್ಲಿ ನಡೆದ ಭಜನೋತ್ಸವ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಶ್ರೀ ಮಹಿಷಮರ್ಧಿನಿ ದೇವಸ್ಥಾನ ಪುಣಚ ಇಲ್ಲಿನ ಗೌರವಾಧ್ಯಕ್ಷ ರಂಗಮೂರ್ತಿ ಎಸ್. ಆರ್. ಅವರು ದೀಪ ಬೆಳಗಿಸಿ ಭಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.





















































 
 

ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಪ್ರಾಸ್ತಾವಿಕ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳವು ಭಜನಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಗಳನ್ನು ನೀಡಿದ್ದು ಕಳೆದ 27 ವರ್ಷಗಳಿಂದ ಭಜನಾ ಕಮ್ಮಟದ ಮುಖಾಂತರ ಸಾವಿರಾರು ಭಜಕರಿಗೆ ತರಬೇತಿಗಳನ್ನು ನೀಡಿ ಮನೆ ಮನ ಬೆಳಗುವಲ್ಲಿ ಮಹತ್ತರ ಪಾತ್ರ ವಹಿಸಿರುತ್ತದೆ ಎಂದರು. ಹಾಗೆಯೇ ಈ ಭಜನೋತ್ಸವ ಕಾರ್ಯಕ್ರಮಕ್ಕೆ ಪೂಜ್ಯರು ಕಳುಹಿಸಿದ ಶುಭ ಸಂದೇಶ ಪತ್ರವನ್ನು ವಾಚಿಸಿದರು.

ವಿಟ್ಲ ತಾಲ್ಲೂಕಿನ ಯೋಜನಾಧಿಕಾರಿ ಸುರೇಶ್ ಗೌಡ ಅವರು ಮಾತನಾಡುತ್ತಾ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದು ಇದರ ಅನುಷ್ಠಾನಕ್ಕೆ ಸಹಕರಿಸಿದ ಯೋಜನೆಯ ಫಲಾನುಭವಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ದೇವಸ್ಥಾನ ಮತ್ತು ಸ್ಥಳೀಯರ ಸಹಕಾರದಿಂದ ಇಲ್ಲಿನ ಭಜನೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದೆ ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಪುಣಚ ಇದರ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು ಅವರು ದೇವಸ್ಥಾನದ ಅಭಿವೃದ್ಧಿಯ ಹಿಂದೆ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರವಾದದ್ದು. ನಾವು ಅದನ್ನು ಮರೆಯುವಂತಿಲ್ಲ. ಗ್ರಾಮಸ್ಥರೆಲ್ಲರೂ ಕ್ಷೇತ್ರಕ್ಕೆ ಆಭಾರಿಯಾಗಿದ್ದೇವೆ. ಈ ಭಜನೋತ್ಸವದ ಮುಖಾಂತರ ಮತ್ತೊಮ್ಮೆ ನಾವೆಲ್ಲರೂ ಸೇರುವ ಹಾಗೆ ಆಗಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.

ವೇದಿಕೆಯಲ್ಲಿ ವಿಟ್ಲ ತಾಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಕಣಂತೂರು, ಭಜನಾ ಪರಿಷತ್ತಿನ ವಿಟ್ಲ ತಾಲೂಕು ಅಧ್ಯಕ್ಷ ದೇವಿದಾಸ ಶೆಟ್ಟಿ, ಅಳಿಕೆ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಕಾರಂತ, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ಬೇಬಿ ಪಟಿಕಲ್ಲು,ಅಳಿಕೆ ವಲಯದ ಭಜನಾ ಪರಿಷತ್ತಿನ ಅಧ್ಯಕ್ಷ ಬಾಬು ನಾಯ್ಕ, ಅಳಿಕೆ ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಅಧ್ಯಕ್ಷ ರಾಜೇಂದ್ರ ರೈ ಬೈಲುಗುತ್ತು ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕಿ ಮೀನಾಕ್ಷಿ ಸ್ವಾಗತಿಸಿ, ಶ್ರೀ ಪ್ರವೀಣ್ ಪೂಜಾರಿ ಸಣ್ಣಗುತ್ತು ಕಾರ್ಯಕ್ರಮವನ್ನು ನಿರೂಪಿಸಿದರು.
ಸೇವಾ ಪ್ರತಿನಿಧಿ ಕಾವ್ಯ ಪಿ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ವಲಯದ 21 ಭಜನಾ ಮಂಡಳಿಗಳ 326 ಕ್ಕೂ ಅಧಿಕ ಭಜಕರಿಂದ ಭಜನಾ ಸೇವೆಯು ನಡೆಯಿತು.

ಅಳಿಕೆ ವಲಯದ ಸೇವಾ ಪ್ರತಿನಿಧಿಗಳು, ಸಾಮಾನ್ಯ ಸೇವಾದಾರರು, ಸುವಿಧಾ ಸಹಾಯಕರು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು, ಭಜನಾ ಪರಿಷತ್ ಅಳಿಕೆ ವಲಯದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ,ಭಜನೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.

error: Content is protected !!
Scroll to Top