ಜೇನುಕೃಷಿ ಕಲಿಸುವ ನೆಪದಲ್ಲಿ ಮನೆಗೆ ಕರೆದೊಯ್ದು ಅತ್ಯಾಚಾರ
ಉಪ್ಪಿನಂಗಡಿ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಫಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಬ್ದುಲ್ ಗಫೂರ್ ವಶವಾಗಿರುವ ಆರೋಪಿ.
ಪ್ರಕರಣದ ದೂರುದಾರರಾದ ಬೆಳಗಾವಿ ಮೂಲದ ಮಹಿಳೆ ತನ್ನ ಗಂಡ ಹಾಗೂ ಅಪ್ರಾಪ್ತ ಪ್ರಾಯದ ಮಗಳೊಂದಿಗೆ ಕೆಲಸದ ನಿಮಿತ್ತ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದಾರೆ. ಆರೋಪಿ ಅಬ್ದುಲ್ ಗಫೂರ್ ಮಗಳಿಗೆ ಜೇನು ಕೃಷಿ ಕಲಿಸುತ್ತೇನೆಂದು ಹೇಳಿದ್ದು, ಅದರಂತೆ ಮಹಿಳೆ ಮಗಳನ್ನು 2 ತಿಂಗಳಿಂದ ಆರೋಪಿಯ ಮನೆಯಲ್ಲಿ ಬಿಟ್ಟಿದ್ದರು.
ಬಾಲಕಿಯ ಹೆತ್ತವರು ಊರಿಗೆ ತೆರಳಿದ್ದವರು ಡಿ.19 ರಂದು ಹಿಂತಿರುಗಿ ಬಂದಾಗ ಬಾಲಕಿ ಅಳುತ್ತಾ ಬಂದು, ಡಿ.2ರಿಂದ ಆರೋಪಿಯು ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿರುವುದಾಗಿ ದೂರುದಾರರಿಗೆ ತಿಳಿಸಿದ್ದಾಳೆ ಎಂದು ದೂರು ನೀಡಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ. ಕ್ರ 118/2025, ಕಲಂ: 115(2), 351(2), 65(1) BNS-2023 4, 6 ಪೋಕ್ಸೋ ಕಾಯ್ದೆ 2012 ಪ್ರಕರಣ ದಾಖಲಾಗಿದೆ.
























