ಮೈಸೂರು: ಸಂವಿಧಾನದ ಅರಿವಿನ ಗೀತೆ ಹಾಡಿದ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ಅವರನ್ನು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಭಿನಂದಿಸಿದರು.
ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದಸರಾ ವಸ್ತು ಪ್ರದರ್ಶನದ ಪಿ ಕಾಳಿಂಗ ರಾವ್ ಗಾನ ಮಂಟಪದಲ್ಲಿ ಮೈಸೂರಿನ ವಕೀಲರಾದ ಸುಂದರ್ ರಾಜ್ ಇವರ ನಿರ್ದೇಶನದಲ್ಲಿ ವಕೀಲರು ನಟಿಸಿದ ದತ್ತು ಮಕ್ಕಳ ಹಕ್ಕಿನ ಕುರಿತಾದ ಕಿರು ನಾಟಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಬಾಲ ಕಲಾವಿದೆ ಸೋನಿಕಾ ಜನಾರ್ದನ್ ಭಾರತೀಯ ಸಂವಿಧಾನ ಪೀಠಿಕೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಕುರಿತು ಹಾಡಿ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಉಷಾರಾಣಿ ಸೇರಿದಂತೆ ನೆರೆದವರ ಮೆಚ್ಚುಗೆಗೆ ಪಾತ್ರಳಾದಳು.

ಈ ಸಂದರ್ಭದಲ್ಲಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರು, ಜಿಲ್ಲಾ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ರೂಪಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಮರ್ ನಾಥ್, ಸೇರಿದಂತೆ ಮೈಸೂರು ನಗರದ ಎಲ್ಲಾ ನ್ಯಾಯಾಲಯದ
ನ್ಯಾಯಾಧೀಶರುಗಳು, ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ಸಮಿತಿ ಸದಸ್ಯರಾದ ಶಿವ ಸ್ವಾಮಿ, ನಾಟಕ ನಿರ್ದೇಶಕರು ವಕೀಲರಾದ ಸುಂದರ್ ರಾಜ್, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ಉಪಾಧ್ಯಕ್ಷರಾದ ರಾಜೇಶ್ ಗೌಡ, ಸದಸ್ಯರುಗಳಾದ ಪ್ರಕಾಶ್, ಮಲ್ಲೇಶ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಸ್ತು ಪ್ರದರ್ಶನ ಸಾಂಸ್ಕೃತಿಕ ಸಮಿತಿ ಸದಸ್ಯರಾದ ಅಜೇಯ್ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಮರ್ ನಾಥ್ ವಂದನಾರ್ಪಣೆ ಮಾಡಿದರು.
























