ಪುತ್ತೂರು: ಬನ್ನೂರಿನ ಮೇಲ್ಮಜಲು ನಿವಾಸಿ, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಅರುಣ್ ಆಚಾರ್ಯ ಅವರು ಹೃದಯಾಘಾತದಿಂದ ಡಿ. 19 ರಂದು ನಿಧನರಾಗಿದ್ದಾರೆ.
ಅರುಣ್ ಅವರಿಗೆ 51 ವರ್ಷವಾಗಿತ್ತು. ಪುತ್ತೂರಿನ ಬೈಪಾಸ್ ರಸ್ತೆಯಲ್ಲಿನ ಹೊಟೇಲೊಂದರಲ್ಲಿ ಉಪಹಾರ ಮುಗಿಸಿ ಹೊರಬರುತ್ತಿದ್ದಾಗ ಕುಸಿದು ಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತರಾಗಿದ್ದರು ಎಂದು ತಿಳಿದು ಬಂದಿದೆ.
ಮೃತರು ತಂದೆ, ಪತ್ನಿ, ಪುತ್ರ, ಸಹೋದರರನ್ನು ಅಗಲಿದ್ದಾರೆ.
























