ಕಲ್ಲರಕೋಡಿ ಸರ್ಕಾರಿ ಶಾಲಾ ದೈ. ಶಿ. ಶಿಕ್ಷಕನ ಶವ ಮನೆಯ ಬಾವಿಯಲ್ಲಿ ಪತ್ತೆ

ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆ ಶಂಕೆ

ಉಳ್ಳಾಲ: ನರಿಂಗಾಣದ ಕಲ್ಲರಕೋಡಿ ಸರ್ಕಾರಿ ಶಾಲಾ ದೈಹಿಕ ಶಿಕ್ಷಕ ಪ್ರಭಾಕರ ಜೋಗಿ (51) ಎಂಬವರ ಶವ ಕೊಂಡಾಣದ ಅವರ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಅನಾರೋಗ್ಯದ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ನಿನ್ನೆ ಸಂಜೆಯ ವೇಳೆಗೆ ಅವರು ತಮ್ಮ ಪುತ್ರಿಯನ್ನು ಉಚ್ಚಿಲದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಬಿಟ್ಟು ಬಂದಿದ್ದರು. ಆ ಬಳಿಕ ತಮ್ ಪತ್ನಿ ಮತ್ತು ಮಗನ ಜೊತೆಗೆ ವಾರ್ಷಿಕೋತ್ಸವಕ್ಕೆ ಹೋಗಲು ತಯಾರಿ ಸಹ ಮಾಡಿಕೊಂಡಿದ್ದರು. ಆ ಬಳಿಕ ಪ್ರಭಾಕರ್ ಅವರು ಕಾಣದೇ ಇದ್ದಾಗ ಅವರ ಪತ್ನಿ ಹುಡುಕಾಟ ನಡೆಸಿದ್ದು ಈ ಸಂದರ್ಭದಲ್ಲಿ ಮನೆಯ ಬಾವಿಯಲ್ಲಿ ಅವರ ಶವ ಪತ್ತೆಯಾಗಿದೆ.





















































 
 

ಪ್ರಭಾಕರ್ ಅವರು ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕೆ ಅವರು ಮುಂಜಾನೆಯಿಂದಲೇ ಮಂಕಾಗಿದ್ದು ಸಂಜೆ ವೇಳೆಗೆ ಅವರ ಶವ ಪತ್ತೆಯಾಗಿದೆ‌. ಈ ಹಿಂದೊಮ್ಮೆ ಪ್ರಭಾಕರ್ ಅವರು ಮನೆಯಿಂದ ನಾಪತ್ತೆಯಾಗಿದ್ದು, ಆ ಬಳಿಕ ಮನೆಗೆ ಮತ್ತೆ ಬಂದಿದ್ದರು. ಉಳ್ಳಾಲ ತಾಲೂಕಿನ ಹಲವು ಶಾಲೆಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು.

ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top