ಶಾಸಕ ಅಶೋಕ್ ರೈ ‌ಗೆ ಅಭಿನಂದನೆ ಸಲ್ಲಿಸಿ ಅಳವಡಿಸಲಾಗಿದ್ದ ಬ್ಯಾನರ್ ಛಿದ್ರ: ದೂರು ದಾಖಲು

ಪುತ್ತೂರು: ಶಾಸಕ‌ ಅಶೋಕ್ ರೈ ಅವರಿಗೆ ಅಭಿನಂದನೆ ಸಲ್ಲಿಸಿ ಅಳವಡಿಸಲಾಗಿದ್ದ ಬ್ಯಾನರ್ ಅನ್ನು ಹರಿದು ಹಾಕಲಾಗಿದ್ದು, ಈ ಸಂಬಂಧ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಕೈಂದಾಡಿಯವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ನಡುವಾಲ್‌ ಎಂಬಲ್ಲಿಗೆ ರಸ್ತೆ ಸಂಪರ್ಕ ಇರಲಿಲ್ಲ. ಅಶೋಕ್‌ ರೈ ಅವರು ಸ್ಥಳೀಯರ ಜೊತೆ ಮಾತುಕತೆ ನಡೆಸಿ ಪುರುಷರ ಕಟ್ಟೆ – ಶಿಬರ – ನಡುವಾಲ್‌ಗೆ ರಸ್ತೆ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಇದಕ್ಕಾಗಿ 5 ಲಕ್ಷ ರೂ. ಅನುದಾನ ಸಹ ಒದಗಿಸಿ ಕೊಟ್ಟಿದ್ದರು. ಊರಿಗೆ ರಸ್ತೆ ಸಂಪರ್ಕ ಸಿಕ್ಕ ಖುಷಿಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಹಾಕಲಾಗಿತ್ತು. ಆದರೆ ಆ ಬ್ಯಾನರ್ ಹರಿದು ಹೋಗಿದೆ.

ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಜೊತೆಗೆ ದೈವ ದೇವರುಗಳಿಗೂ ಹರಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.





















































 
 
error: Content is protected !!
Scroll to Top