ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಮಗು ಸಾವು

ನೀರು ಸೇದುವಾಗ ಕೈಯಿಂದ ಜಾರಿದ ಒಂದೂವರೆ ವರ್ಷದ ಮಗು

ಉಡುಪಿ: ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಉಡುಪಿ ನಗರದ ಕಿನ್ನಿಮೂಲ್ಕಿ ಬಳಿ ಮಂಗಳವಾರ ನಡೆದಿದೆ.

ಕೀರ್ತನ ಮೃತ ಮಗು. ನೀರು ಸೇದುತ್ತಿದ್ದ ವೇಳೆ ತಾಯಿಯ ಕೈಯಿಂದ ಜಾರಿ ಮಗು ಬಾವಿಯೊಳಗೆ ಬಿದ್ದಿದೆ. ಆಯತಪ್ಪಿ ಬಿದ್ದ ಮಗುವಿನ ರಕ್ಷಣೆಗೆ ತಕ್ಷಣವೇ ತಾಯಿ ಬಾವಿಗಿಳಿದಿದ್ದಾರೆ. ತಾಯಿ ನಯನ ಹಗ್ಗದ ಸಹಾಯದಿಂದ ಬಾವಿಗಿಳಿದಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ಮಗು ಕೊನೆಯುಸಿರೆಳೆದಿತ್ತು. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





















































 
 
error: Content is protected !!
Scroll to Top