ಉಜಿರೆ: ಬೆಳ್ತಂಗಡಿ ತಾಲೂಕು ಅರೆಭಾಷೆ ಅಭಿಮಾನಿ ಬಳಗದ ವತಿಯಿಂದ ಅರೆಭಾಷೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮವು ಉಜಿರೆಯ ಅಮೃತ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮೂಡಿಬಂತು.
ಸ್ವಯಂ ತೊಡಗಿಸಿಕೊಳ್ಳುವಿಕೆಯೊಂದೇ ಭಾಷೆಯ ಬೆಳವಣಿಗೆಗೆ ಆಧಾರ – ಸೀತಾರಾಮ ಕೇವಳ
ಯಾವುದೇ ಭಾಷೆಯಾದರೂ ಕೇವಲ ಕಾರ್ಯಕ್ರಮಗಳಿಂದ ಸಶಕ್ತವಾಗಿ ಉಳಿಯಲಾರದು. ಬದಲಾಗಿ ಭಾಷೆಯನ್ನು ನೈಮಿತ್ತಿಕ ಜೀವನದಲ್ಲಿ ಬಳಸಿದಾಗ ಮಾತ್ರವೇ ಅದು ಉಳಿಯಲು ಸಾಧ್ಯ ಎಂದು ಕೇವಳ ಪ್ರತಿಪಾದಿಸಿದರು.

ಅಕಾಡೆಮಿಯ ನಿರ್ದೇಶಕರಾದ ತೇಜಕುಮಾರ್ ಬಡ್ಡಡ್ಕ ಕಾರ್ಯಕ್ರವನ್ನು ಉದ್ಘಾಟಿಸಿ ಭಾಷೆಯ ಇತಿಹಾಸವನ್ನು ಉಲ್ಲೇಖಿಸಿ ಅರೆಭಾಷೆ ರಾಜಭಾಷೆ ಎಂದು ಪ್ರತೀತಿಯಾಗಿದೆ ಎಂದರು.
ಮುಖ್ಯ ಅತಿಥಿಯವರಾಗಿ ಎಸ್. ಡಿ. ಎಂ. ಕಾಲೇಜಿನ ರಾಜ್ಯಶಾಸ್ತ್ರ ಪ್ರೊಫೆಸರ್ ಶಿವಕುಮಾರ್ ಪಿ.ಪಿ. ಮಾತನಾಡಿ ಭಾಷೆಯ ಉಳಿವು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಗೌರವ ಉಪಸ್ಥಿತಿಯಲ್ಲಿದ್ದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಿನುತಾ ರಜತ್ ಗೌಡ ಭಾಷೆಯ ವಿಶಿಷ್ಟತೆಯನ್ನು ಗುರುತಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿಯ ಅರೆಭಾಷೆ ಅಭಿಮಾನಿ ಬಳಗದ ಸ್ಥಾಪಕಾಧ್ಯಕ್ಷೆ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ವಳಂಬ್ರ ಮಾತನಾಡಿ ಅರೆಭಾಷೆ ಅಭಿಮಾನಿ ಬಳಗವು ಮರುಭೂಮಿಯಲ್ಲಿ ಓಯಸಿಸ್ ರೀತಿಯಲ್ಲಿ ಕಾರ್ಯವೆಸಗುತ್ತಿದೆ ಎಂದರು.
ಲೋಕೇಶ್ವರಿಯವರ ದೂರದೃಷ್ಟಿ
ಬೆಳ್ತಂಗಡಿಯ ಅರೆಭಾಷೆಯ ಬೆಳವಣಿಗೆಗೆ ಸಾಂಸ್ಥಿಕ ರೂಪ ಕೊಟ್ಟವರು ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ವಳಂಬ್ರ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಜೊತೆಗೆ ಕೈ ಜೋಡಿಸಿಕೊಂಡು ಕಳೆದ ಅನೇಕ ವರ್ಷಗಳಿಂದ ಅರೆಭಾಷೆಯ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದಾರೆ.
ಸನ್ಮಾನ
ವಿಶೇಷ ಸಾಧಕರಾದ ಡಾ. ಯು. ಪಿ. ಶಿವಾನಂದ ಮತ್ತು ಶಿಕ್ಷಕಿ ಶ್ರೀಮತಿ ಜಯಾ ಅವರಿಗೆ ಸನ್ಮಾನ ನೀಡಲಾಯಿತು.
ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿದ್ಯಾ ಮತ್ತು ನಿವೃತ್ತ ಶಿಕ್ಷಕಿ ಕೃಷ್ಣವೇಣಿ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಅರೆಭಾಷೆ ಅಭಿಮಾನಿ ಬಳಗದ ಸ್ಥಾಪಕ ಕಾರ್ಯದರ್ಶಿ ಶ್ರೀಮತಿ ಉಷಾ ಲಕ್ಷ್ಮಣ ವಳಂಬ್ರ ಅವರು ಸ್ವಾಗತಿಸಿ ಅವರು ವಂದಿಸಿದರು. ಶ್ರೀಮತಿ ಪುಷ್ಪಾ ಭರತ್ ಗೌಡ ಪ್ರಾರ್ಥಿಸಿದರು. ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶ್ರೀಮತಿ ಧಿವ್ಯಾ ಸೂರಜ್ ಮತ್ತು ಶ್ರೀಮತಿ ರೇಖಾ ಬಾಲಕೃಷ್ಣ ಸಂದೇಶ ವಾಚನ ಮಾಡಿದರು.
























