ಮೈಸೂರಿನಲ್ಲಿ ಸೋನಿಕಾ ಜನಾರ್ದನ್ ಅವರಿಂದ ಸಂವಿಧಾನ ಪೀಠಿಕಾ ಗೀತೆ

ಮೈಸೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯ ಮೈಸೂರು ಮತ್ತು ಮಹಾಬೆಳಕು (ರಿ ) ಇದರ ವತಿಯಿಂದ ವಿಶ್ವ ವಿದ್ಯಾನಿಲಯದ ಸಭಾಂಗಣದಲ್ಲಿ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ನಡೆದ ಸ್ಪರ್ಧೆಗಳ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ಸಂವಿಧಾನ ಪೀಠಿಕೆ ಗೀತೆ ಹಾಡಿ ಜನಮೆಚ್ಚುಗೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಖ್ಯಾತ ಚಿಂತಕರಾದ ಶಂಕರ ದೇವನೂರು, ಹಿರಿಯ ರಂಗ ಕರ್ಮಿ ರಾಜಶೇಖರ ಕದಂಬ, ರಂಗ ಕಲಾವಿದರಾದ ಹೆಚ್.ಪಿ. ವೈರಾಮುಡಿ ಮಂಡ್ಯ, ಆರ್.ಕೆ. ಶಿವಕುಮಾರ್, ಉಪಸ್ಥಿತರಿದ್ದರು. ಮಹಾಬೆಳಕು (ರಿ) ಸಂಸ್ಥಾಪಕ ರಾದ ಕಾತ್ಯಾಯಿನಿ ಯಶೋಮಿತ್ರ ಸ್ವಾಗತಿಸಿ, ವಂದಿಸಿದರು.























































error: Content is protected !!
Scroll to Top