ಔತಣಕೂಟ ವಿವಾದ: ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಬೆಳಗಾವಿ: ಶಾಸಕರ ಜೊತೆಗೆ ನಗರದ ಹೊರವಲಯದಲ್ಲಿ ಔತಣಕೂಟ ನಡೆಸಿದ ವಿವಾದಕ್ಕೆ ಸಂಬಂಧಿಸಿದ ಹಾಗೆ ಡಿಸಿಎಂ ‌ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಸ್ಥಳೀಯರು ಮತ್ತು ಪಕ್ಷದವರು ಪ್ರೀತಿಯಿಂದ ಆಹ್ವಾನಿಸಿದ ಕಾರಣಕ್ಕೆ ಔತಣಕೂಟದಲ್ಲಿ ಭಾಗವಹಿಸಿರುವುದಾಗಿ ಅವರು ತಿಳಿಸಿದ್ದಾರೆ. ಪ್ರತಿನಿತ್ಯ ಸ್ಥಳೀಯರು ಅಥವಾ ನಮ್ಮ ಕ್ಷೇತ್ರದವರು ಪ್ರೀತಿಯಿಂದ ಊಟ ತಂದು ಕೊಡುತ್ತಾರೆ. ಪ್ರೀತಿಯಿಂದ ಕರೆದಾಗ ಬೇಡ ಎನ್ನಲು ಆಗುವುದಿಲ್ಲ. ಆ ಕಾರಣಕ್ಕೆ ಒಂದೊಂದು ದಿನ ಒಂದೊಂದು ಕಡೆಗೆ ಔತಣಕ್ಕೆ ಹೋಗುತ್ತೇವೆ. ಇದು ಯಾವ ಔತಣ ಕೂಟವೂ ಅಲ್ಲ, ಏನೂ ಅಲ್ಲ ಎಂದು ಹೇಳಿದ್ದಾರೆ.

ಜಿಲ್ಲಾ‌‌ ಕಾಂಗ್ರೆಸ್ ಅಧ್ಯಕ್ಷ ದೊಡ್ಡಣ್ಣ ಅವರ ಆಹ್ವಾನದ ಕುರಿತು ಮಾತನಾಡಿದ ಅವರು, ಅವರು ನನ್ನ ಸ್ನೇಹಿತರು. ಅವರ ಮನೆಗೆ ಕಳೆದ 15 ವರ್ಷಗಳಿಂದ ಕರೆಯುತ್ತಿದ್ದರು. ನಾವು ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುತ್ತದೆಯೇ? ಹೀಗಾಗಿ ನನ್ನನ್ನೂ ಒಳಗೊಂಡಂತೆ ಹಲವರು ಊಟಕ್ಕೆ ಹೋಗಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ.





















































 
 
error: Content is protected !!
Scroll to Top