ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ : ವ್ಯಾಪಕ ಹಾನಿ

ಟೋಕಿಯೊ: ಸೋಮವಾರ ತಡರಾತ್ರಿ ಉತ್ತರ ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೆಸಿಫಿಕ್ ಕರಾವಳಿ ಭಾಗಗಳಲ್ಲಿ ಸುನಾಮಿ ಅಲೆಗಳು ಎದ್ದಿವೆ.

ಅಮೋರಿ ಕರಾವಳಿಯಲ್ಲಿ ತಡರಾತ್ರಿ ಭೂಕಂಪ ಮತ್ತು ಸುನಾಮಿ ನಂತರ ಜಪಾನ್‌ನಲ್ಲಿ ಸಾಕಷ್ಟು ಹಾನಿಯಾಗಿದೆ. ಹೊನ್ಶುವಿನ ಉತ್ತರ ತುದಿಯಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದ್ದು, ಹಲವಾರು ಕರಾವಳಿ ಪಟ್ಟಣಗಳಿಗೆ ಸಣ್ಣ ಸುನಾಮಿ ಅಲೆಗಳು ಬಡಿದಿವೆ.

ಭೂಕಂಪ ಪೀಡಿತ ಸುಮಾರು 800 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶಿಂಕನ್ಸೆನ್ ಸೇವೆಗಳು ಮತ್ತು ಕೆಲವು ಸ್ಥಳೀಯ ರೈಲುಗಳನ್ನು ನಿಲ್ಲಿಸಲಾಗಿದೆ. ಮುಂದಿನ ಸೂಚನೆಯ ವರೆಗೆ ಜನರು ತಾವಿರುವ ಸ್ಥಳವನ್ನು ಬಿಟ್ಟು ಎಲ್ಲೂ ಹೋಗದಂತೆ ಜನರಿಗೆ ಮುಖ್ಯ ಸಂಪುಟ ಕಾರ್ಯದರ್ಶಿ ಮಿನೋರು ಕಿಹರಾ ಎಚ್ಚರಿಸಿದ್ದಾರೆ.





















































 
 

ಹಚಿನೋಹೆ ವಾಯುನೆಲೆಯಲ್ಲಿ ಸುಮಾರು 480 ಜನರು ಆಶ್ರಯ ಪಡೆದಿದ್ದಾರೆ. ರಕ್ಷಣಾ ಸಚಿವಾಲಯವು ಹಾನಿಯನ್ನು ಸಮೀಕ್ಷೆ ಮಾಡಲು 18 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ ಎಂದು ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ತಿಳಿಸಿದ್ದಾರೆ.

error: Content is protected !!
Scroll to Top