ಬಾಲಕನಿಗೆ ಲೈಂಗಿಕ ಕಿರುಕುಳ : ಅಂಗಡಿ ಮಾಲಕನ ವಿರುದ್ಧ ಪೋಕ್ಸೊ ಕೇಸ್‌

ಚಾಕಲೇಟ್‌ ಖರೀದಿಸಲು ಬಂದಿದ್ದ ಬಾಲಕನ ಕೈಕಾಲು ಕಟ್ಟಿ ಹಾಕಿ ಕಿರುಕುಳ

ಮಂಗಳೂರು : ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಂಗಡಿ ಮಾಲಕನೊಬ್ಬನನ್ನು ಪೋಕ್ಸೊ ಕಾಯ್ದೆಯಡಿ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಚೊಕ್ಕಬೆಟ್ಟು ನಿವಾಸಿ ಅಬ್ದುಲ್ ಇಸ್ಮಾಯೀಲ್ ಬಂಧಿತ ಆರೋಪಿ.

ಚೊಕ್ಕಬೆಟ್ಟು ಪೇಟೆಯಲ್ಲಿ ಹನಿ ಫ್ಯಾಶನ್ ಮತ್ತು ಜನರಲ್ ಸ್ಟೋರ್ ಎಂಬ ಅಂಗಡಿಯ ಮಾಲಕನಾಗಿರುವ ಆರೋಪಿ ಇಸ್ಮಾಯೀಲ್ ತನ್ನ ಅಂಗಡಿಗೆ ಚಾಕಲೇಟ್‌ ಖರೀದಿಸಲೆಂದು ಬಂದಿದ್ದ 11 ವರ್ಷದ ಬಾಲಕನ ಕೈ-ಕಾಲನ್ನು ಕಟ್ಟಿ ಅಂಗಡಿಯ ಒಂದು ಕೊಠಡಿಯಲ್ಲಿ ಕೂಡಿಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕನ ತಾಯಿ ಸುರತ್ಕಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.





















































 
 

ಈ ಸಂಬಂಧ ಕಲಂ 4, 6 ಪೋಕ್ಸೊ ಹಾಗೂ 351(2), 117(2) ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಭಾನುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!
Scroll to Top