ಮಾನಹಾನಿಕರ ಪೋಸ್ಟ್: ಪೊಲೀಸರಿಗೆ ದೂರು ನೀಡಿದ ಬಿಜೆಪಿ ನಾಯಕಿ ಆಶಾ ತಿಮ್ಮಪ್ಪ

ಪುತ್ತೂರು: ಪ್ರಧಾನಿ ಮೋದಿ ಅವರು ಉಡುಪಿಗೆ ಬಂದು ಹೋದ ವಿಚಾರದಲ್ಲಿ ವಿರೋಧಿಗಳ ಅಪಪ್ರಚಾರ ಹೆಚ್ಚಾಗಿದ್ದು, ಇದು ಸಾರ್ವಜನಿಕ ವಲಯದಲ್ಲೂ ‌ಸಾಕಷ್ಟು ಪ್ರಶ್ನೆಗಳನ್ನು ಸೃಷ್ಟಿಸಿದೆ.

ಕಳೆದ ಬಾರಿ ಬಿಜೆಪಿಯಿಂದ ವಿಧಾನಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಶಾ ತಿಮ್ಮಪ್ಪ ಅವರಿಗೆ ಸಂಬಂಧಿಸಿದ ಹಾಗೆಯೂ ‌ಮಾನಹಾನಿಕರ ಪೋಸ್ಟ್ ಒಂದು ಹರಿದಾಡುತ್ತಿದ್ದು, ಈ ಬಗ್ಗೆ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.

“ಪ್ರಧಾನಿ ಮೋದಿ ಅವರು ಉಡುಪಿಗೆ ಬಂದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ನನಗೂ ಅವರನ್ನು ನೋಡುವ ಭಾಗ್ಯ ಸಿಗಬಹುದು ಎಂದುಕೊಂಡಿದ್ದೆ. ಆದರೆ ಈಗ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ” ಎಂಬುದಾಗಿ ಆಶಾ ತಿಮ್ಮಪ್ಪ ಅವರ ಹೇಳಿಕೆ ಎಂಬಂತೆ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ವೈರಲ್ ಆಗಿದೆ.





















































 
 

ಇಂತಹ ದುರುದ್ದೇಶಕರ ಪೋಸ್ಟ್ ಮೂಲಕ ಮಾನಹಾನಿ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top